Wednesday, January 22, 2025

ಪವರ್ TVಯಲ್ಲಿ ಶ್ರೀದೇವಿಯ ಹೀರೋ ಎಕ್ಸ್​ಕ್ಲೂಸಿವ್ ಟಾಕ್​

ಬಾಲಿವುಡ್​, ಕಾಲಿವುಡ್​​​ನಲ್ಲಿ ಮಿಂಚಿದ್ದ ನಟ ಮೊದಲ ಬಾರಿಗೆ ಸ್ಯಾಂಡಲ್​ವುಡ್​ನಲ್ಲಿ ಅ್ಯಕ್ಷನ್​ ಕಟ್​ ಹೇಳೋಕೆ ಸಜ್ಜಾಗಿದ್ದಾರೆ. ಯೆಸ್​.. ಸತ್ಯಜಿತ್​​​​ ಬುಲೆಟ್​​​ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳಲಿದ್ದಾರೆ. ಸದ್ಯ, ಈ ಚಿತ್ರ ಸೆಟ್ಟೇರಿದ್ದು ಸದ್ಯದಲ್ಲೆ ಶೂಟಿಂಗ್​ ಶುರುವಾಗಿದೆ. ಈ ನಡುವೆ ಪವರ್ ಟಿವಿ ಜೊತೆ ನಿರ್ದೇಶಕ ಸತ್ಯಜಿತ್​​​ ಹಲವು ಇಂಟ್ರೆಸ್ಟಿಂಗ್​ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಶ್ರೀದೇವಿ ಬಗ್ಗೆಯೂ ಮಾತನಾಡಿದ ಸತ್ಯಜಿತ್ ಹೇಳಿದ್ದೇನು ಗೊತ್ತಾ..? ನೀವೇ ಓದಿ.

  • ಜಾಹ್ನವಿ ಕಪೂರ್, ಕಮಲ್ ಹಾಸನ್ ಬಗ್ಗೆ ಸತ್ಯಜಿತ್ ಹೇಳಿದ್ದೇನು..?

ಭಾರತೀಯ ಚಿತ್ರರಂಗದಲ್ಲೆ ನೂರಾರು ಸಿನಿಮಾಗಳಲ್ಲಿ ಮಿಂಚಿ ಸಂಚಲನ ಮೂಡಿಸಿದ್ದ ಸ್ಟಾರ್​ ನಟ ಸತ್ಯಜಿತ್​​. ಇದೀಗ ಮೊದಲ ಬಾರಿಗೆ ಕನ್ನಡದ ಬುಲೆಟ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳೋ ಮೂಲಕ ಸರ್​ಪ್ರೈಸ್​​ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಧರ್ಮ ಕೀರ್ತಿರಾಜ್​​ ನಾಯಕನಾಗಿ, ಮುಂಬೈನ ಶ್ರೀಯಾ ಶುಕ್ಲಾ, ಅಜಿತಾ ಜಾ ನಾಯಕಿಯರಾಗಿ ನಟಿಸ್ತಿದ್ದಾರೆ. ಸದ್ಯ ಈ ಚಿತ್ರದ ಮುಹೂರ್ತ ಸಮಾರಂಭ ನಗರದ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆದಿದೆ.

ಕನ್ನಡದಲ್ಲಿ ಇಷ್ಟು ದಿನಗಳ ನಂತ್ರ ಯಾಕೆ ಸಿನಿಮಾ ಮಾಡ್ಬೇಕು ಅನ್ನೋ ಉತ್ಸಾಹ ಅನ್ನೋ ಪ್ರಶ್ನೆಗೆ ಸತ್ಯಜಿತ್​ ಕನ್ನಡ ಇಂಡಸ್ಟ್ರಿಯನ್ನು ಹಾಡಿ ಹೊಗಳಿದ್ರು.

ಪದಿನಾರು ವೈತಿನಿಲ್ಲೇ ಚಿತ್ರದಲ್ಲಿ ಶ್ರೀದೇವಿ ಜೊತೆ ಲೀಡ್​​ ರೋಲ್​ನಲ್ಲಿ ನಟಿಸಿದ್ದ ಸತ್ಯಜಿತ್​ ಕೆಲವು ಇಂಟ್ರೆಸ್ಟಿಂಗ್​​ ವಿಚಾರಗಳನ್ನು ಹಂಚಿಕೊಂಡ್ರು. ಶ್ರೀದೇವಿ ಸಾವಿನ ಬಗ್ಗೆ ಕೇಳಿದಾಗ ಭಾವುಕರಾಗಿಬಿಟ್ರು.

ಶ್ರೀದೇವಿ ಮಗಳನ್ನು ಬುಲೆಟ್​ ಚಿತ್ರಕ್ಕೆ ನಾಯಕಿಯಾಗಿ ಯಾಕೆ ಸೆಲೆಕ್ಟ್​ ಮಾಡಿಲ್ಲ ಅನ್ನೋ ಪ್ರಶ್ನೆಗೂ ನಿಖರ ಉತ್ತರ ಕೊಟ್ರು. ಜಾನ್ವಿ ಕಪೂರ್​​ನಾ ಯಾಕೆ ಆಯ್ಕೆ ಮಾಡಿಲ್ಲ ಅಂತಾ ಸತ್ಯಜಿತ್​ ಓಪನ್​ ಆಗಿ ಹೇಳಿದ್ರು.

ಕಮಲ್​ ಹಾಸನ್​ ಜೊತೆ ಸ್ಕ್ರೀನ್​ ಶೇರ್​ ಮಾಡಿರುವ ಸತ್ಯಜಿತ್​​ ವಿಕ್ರಮ್​ ಚಿತ್ರದ ಬಗ್ಗೆ ಮಾತನಾಡಿದ್ದಲ್ಲದೇ, ಹುಟ್ಟೂರು ಬೆಂಗಳೂರಿನ ಬಗ್ಗೆ ಹಾಡಿ ಕೊಂಡಾಡಿದ್ರು.

ಕ್ರೈಮ್​ ಥ್ರಿಲ್ಲರ್​ ಫ್ಯಾಮಿಲಿ ಸೆಂಟಿಮೆಂಟ್​ ಸಿನಿಮಾ ಇದಾಗಿದ್ದು ಸತ್ಯಜಿತ್​ ಸತಃ ಚಿತ್ರನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಎನಿವೇ , ಆಲ್​ ದಿ ಬೆಸ್ಟ್​ ಫಾರ್​​ ಬುಲೆಟ್​ ಟೀಮ್​.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES