Sunday, December 22, 2024

ನಮ್ಮ ತಾಯಿಗೆ ಕಿರುಕುಳ, ನ್ಯಾಯ ಕೊಡಿಸುವಂತೆ ಸಂತ್ರಸ್ತ ಬಾಲಕಿಯರು ಪ್ರಧಾನಿಗೆ ಪತ್ರ

ಮೈಸೂರು; ಲೈಂಗಿಕ ದೌರ್ಜನ್ಯ ಅಡಿ ಬಂಧನವಾಗಿರುವ ಮುರುಘಾಮಠದ ಶಿವಮೂರ್ತಿ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲವೆಂದು ಸಂತ್ರಸ್ತ ಬಾಲಕಿಯರು ಪತ್ರ ಬರೆದಿದ್ದಾರೆ.

ಅಪ್ರಾಪ್ತ ಬಾಲಕಿಯರ ಮೇಲೆ ಮುರುಘಾಮಠದ ಶಿವಮೂರ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯರು ಆರೋಪಮಾಡಿದ್ದರು. ಕೆಳೆದ ತಿಂಗಳು ಶಿವಮೂರ್ತಿ ಬಂಧಿಸಿದ್ದು, ಆದರೆ ಈ ಕೇಸ್​ನಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದಿದ್ದಾರೆ.

ಸಂತ್ರಸ್ತೆ ಬಾಲಕಿಯರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಈ ಕೇಸ್​ನಲ್ಲಿ ನಮಗೆ ಅನ್ಯಾಯವಾಗಿದೆ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ನಮ್ಮ ತಾಯಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಮ್ಮ ತಾಯಿಗೂ ಕಿರುಕುಳ ನೀಡುತ್ತಿದ್ದಾರೆ. ನಮಗೆ ಅನ್ಯಾಯ ಆಗುತ್ತಿದೆ‌. ನಮಗೆ ನ್ಯಾಯ ಕೊಡಿಸಿ ಎಂದು ಬಾಲಕಿಯರು ಬರೆದ ಪತ್ರ ಪವರ್ ಟಿವಿಗೆ ಲಭ್ಯವಾಗಿದೆ.

RELATED ARTICLES

Related Articles

TRENDING ARTICLES