Monday, December 23, 2024

ಪ್ರಜ್ವಲ್​ ದೇವರಾಜ್​​ ಅಬ್ಬರಿಸೋ ತವಕ..!

ಬೆಂಗಳೂರು: ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರೋ ಪ್ರಜ್ವಲ್​ ದೇವರಾಜ್​​ ಅಬ್ಬರಿಸೋ ತವಕದಲ್ಲಿದ್ದಾರೆ. ತುಂಬಾ ದಿನಗಳಿಂದ ಬ್ರೇಕ್​ ಥ್ರೂ ಚಿತ್ರಕ್ಕಾಗಿ ಕಾಯ್ತಿರೋ ಪ್ರಜ್ವಲ್​ಗೆ ಈ ಸಿನಿಮಾ ಸಖತ್​​​​​​​ ನಿರೀಕ್ಷೆ ಮೂಡಿಸಿದೆ. ಒಟ್ಟು ಐದು ಶೇಡ್​​ಗಳಲ್ಲಿ ಪ್ರಜ್ವಲ್​​​ ಅಬ್ಬರ ತುಸು ಜೋರಾಗಿರಲಿದೆ. ಸದ್ಯ, ಈ ಚಿತ್ರದ ಮೇಕಿಂಗ್​​​ ವೀಡಿಯೋ ರಿವೀಲ್​ ಆಗಿದ್ದು ಚಿತ್ರದ ಕರಾಮತ್ತಿನ ತಾಕತ್ತನ್ನು ತೋರಿಸಿದೆ.

ಕ್ರಿಶ್​ ಗೆಟಪ್​​​​​ನಲ್ಲಿ ಪ್ರಜ್ವಲ್​​ ಮೈನವಿರೇಳಿಸೋ ಫೈಟಿಂಗ್​​​ ಸಿನಿಮಾದಲ್ಲಿ ಜೋರಾಗಿದೆ. ಪ್ರಜ್ವಲ್​ ದೇವರಾಜ್​​ ಸಿನಿಮಾಗಳಂದ್ರೆ ಮನರಂಜನೆಗೇನೂ ಕೊರತೆ ಇಲ್ಲ. ಸದ್ಯ ಇತ್ತೀಚೆಗೆ ಪ್ರೇಕ್ಷಕರ ಹೃದಯ ಗೆದ್ದ ಸಿನಿಮಾಗಳು ಬಂದ್ರು ಬಾಕ್ಸ್​​ ಆಫೀಸ್​​ ಕಲೆಕ್ಷನ್​ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಹಣ ಗಳಿಸಲಿಲ್ಲ. ಇದೀಗ ಕ್ರಿಶ್​ ಅವತಾರದಲ್ಲಿ ಐ ಯಾಮ್​ ಕಂಬ್ಯಾಕ್​​ ಅಂತಿದ್ದಾರೆ ಪ್ರಜ್ವಲ್​​. ಯ್ಯುಟ್ಯೂಬ್​​ನಲ್ಲಿ ಸೌಂಡ್​​ ಮಾಡ್ತಿರೋ ಅಬ್ಬರ ಸಿನಿಮಾದ ಟ್ರೈಲರ್​​​ ಪ್ರಾಮಿಸಿಂಗ್​​​ ಆಗಿದ್ದು ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ, ಜೊತೆಗೆ ಮೇಕಿಂಗ್​​ ವೀಡಿಯೋ ಇನ್ನಷ್ಟು ಕ್ಯೂರಿಯಾಸಿಟಿ ಮೂಡಿಸಿದೆ.

ಒಟ್ಟಾರೆ ಐದು ಶೇಡ್​ಗಳಲ್ಲಿ ಪ್ರಜ್ವಲ್​ ರೋಲ್​ ಲೀಡ್​ ಮಾಡಲಿದ್ದಾರೆ. ಹಾಗಾಗಿ ಚಿತ್ರದಲ್ಲಿ ಫನ್​​​, ಆ್ಯಕ್ಷನ್​, ಕನ್ಪ್ಯೂಷನ್​​​, ಲವ್​​​​​​​, ಸಸ್ಪೆನ್ಸ್​​ ಎಲ್ಲವೂ ಥ್ರಿಲ್ಲಿಂಗ್​ ಆಗಿರಲಿದೆ. ಜೊತೆಗೆ ಪ್ರಜ್ವಲ್​ಗೆ ಮೂವರು ನಾಯಕಿಯರಿದ್ದು ಹಾಡುಗಳು ಕೂಡ ಪ್ರೇಕ್ಷಕರಿಗೆ ಗುಂಗಿಡಿಸಲಿವೆ. ಸದ್ಯ, ಈಗ ರಿವೀಲ್​​ ಆಗಿರುವ ಮೇಕಿಂಗ್​ ವೀಡಿಯೋದಲ್ಲಿ ಚತ್ರತಂಡದ ಹಾರ್ಡ್​​ವರ್ಕ್​ ಎದ್ದು ಕಾಣುತ್ತೆ. ನವೆಂಬರ್​​ 18ಕ್ಕೆ ಚಿತ್ರತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಆರ್ಮುಗಂ ರವಿಶಂಕರ್​​​, ಶೋಭರಾಜ್ ಆ್ಯಕ್ಷನ್​​​​ ಆರ್ಭಟ ಸಿನಿಮಾದಲ್ಲಿದ್ದು, ಉಮೇಶ್​​​, ಮೋಹನ್​ ಜುನೇಜಾ ಕಾಮಿಡಿ ಸಿನಿಮಾದಲ್ಲಿದೆ. ಅಬ್ಬರ ಚಿತ್ರದ ಮೇಕಿಂಗ್​ ವೀಡಿಯೋ ನೋಡಿದ್ರೆ ಚಿತ್ರದಲ್ಲಿ ಆ್ಯಕ್ಷನ್​ ಸೀಕ್ವೆನ್ಸ್​​ ಭರ್ಜರಿಯಾಗಿರೋದು ತಿಳಿಯುತ್ತೆ. ಹೆಚ್ಚು ಡ್ಯೂಪ್​​ ಬಳಸದೆ ಅಪಾಯಕಾರಿ ಆ್ಯಕ್ಷನ್​​ ದೃಶ್ಯಗಳನ್ನು ಶೂಟ್​ ಮಾಡಲಾಗಿದೆ. ಜೊತೆಗೆ ಆರ್ಮುಗಂ ರವಿಶಂಕರ್​ ಅಗೈನ್​ ರೋರಿಂಗ್​​​ ಘೋರವಾಗಿದೆ. ಶೋಭರಾಜ್​​ ಖಡಕ್​ ವಾಯ್ಸ್​​ ಚಿತ್ರಕ್ಕೆ ಪ್ಲಸ್​ ಆಗಿರೋದು ಎದ್ದು ಕಾಣುತ್ತೆ.

ಇದಲ್ಲದೆ ಕಾಮಿಡಿ ಸಿಕ್ಕಾಪಟ್ಟೆ ಸ್ಪೇಸ್​ ನೀಡಿರೋದು ಕೂಡ ಮೇಕಿಂಗ್ ವೀಡಿಯೋದಲ್ಲಿ ಸಾಬೀತಾಗುತ್ತದೆ. ಮೋಹನ್​ ಜುನೇಜಾ, ಹಿರಿಯ ನಟ ಉಮೇಶ್​​, ಅರಸು ಮಹಾರಾಜ್​​, ವಿಜಯ್​ ಚಂದ್ರು ಅವರ ಫನ್ನಿ ಸೀನ್ಸ್​​ ಡೈಲಾಗ್​ ಇಲ್ಲದೇ ನಗು ತರಿಸುತ್ತಿವೆ. ಕಾಮಿಡಿ ಎಂಟರ್​ಟೈನ್​ ಜೊತೆಗೆ ರಿವೇಂಜ್​ ಥಾಟ್​​ ಕೂಡ ಇರೋದ್ರಿಂದ ಚಿತ್ರದ ಮೇಲಿನ ಕ್ಯೂರಿಯಾಸಿಟಿ ಡಬಲ್​ ಡಬಲ್​ ಆಗಿದೆ.

ಈ ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯರಾಗಿ ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ ಪೊನ್ನಪ್ಪ ಇದ್ದಾರೆ. ರವಿ ಬಸ್ರೂರು ಮ್ಯೂಸಿಕ್​​ ಚಿತ್ರದ ಹೈಲೈಟ್​​​. ಜೆ.ಕೆ.ಗಣೇಶ್ ಸಿನಿಮಾಟೋಗ್ರಫಿ ಚಿತ್ರಕ್ಕೆ ಪ್ಲಸ್​ ಆಗಲಿದೆ. ಸಿ. ಅಂಡ್ ಎಂ.ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ಸಿನಿಮಾ ನಿರ್ಮಾಣ ಮಾಡಿದ್ದು,  ಕೆ. ರಾಮ್​​ನಾರಾಯಣ್​​ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೀಗ ಶುಕ್ರದೆಸೆ ನಡೀತಿದೆ. ಹಾಗಾಗಿ ಅಬ್ಬರ ಚಿತ್ರ ಬೆಳ್ಳಿ ತೆರೆಯ ಮೇಲೆ ಅಬ್ಬರಿಸುತ್ತಾ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

 

 

 

 

 

 

RELATED ARTICLES

Related Articles

TRENDING ARTICLES