Wednesday, January 22, 2025

ಬೆಳಗಾವಿ ಪೊಲೀಸ್​ ಠಾಣೆಯಲ್ಲಿ ಆರೋಪಿ ಕಸ್ಟೋಡಿಯಲ್ ಡೆತ್

ಬೆಳಗಾವಿ; ಗಾಂಜಾ ಪ್ರಕರಣಯೊಂದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದ ಆರೋಪಿ ಅನುಮಾನಾಸ್ಪದ ಸಾವೀಗಿಡಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಗ್ರಾಮೀಣ ಠಾಣೆಯಲ್ಲಿ ಆರೋಪಿ ಬಸನಗೌಡ ಪಾಟೀಲ್(45) ಮೃತರು, ಗಾಂಜಾ ಪ್ರಕರಣದಲ್ಲಿ ಇತ್ತೀಚಿಗೆ ಬಸನಗೌಡನನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರ ವಶದಲ್ಲಿರುವಾಗಲೇ ಈಗ ಆರೋಪಿ ಅನುಮಾನಾಸ್ಪದ ಸಾವೀಗಿಡಾಗಿದ್ದಾನೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಮೃತ ಬಸನಗೌಡ ಪಾಟೀಲ್, ಗಾಂಜಾ ಪ್ರಕರಣದಲ್ಲಿ ಬಸನಗೌಡನ ವಶಕ್ಕೆ ಪಡೆದು ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಬೆಲ್ಲದ ಬಾಗೇವಾಡಿಯಿಂದ ಬೆಳಗಾವಿಗೆ ಕರೆತಂದಿದ್ದರು. ಆರೋಪಿ ವಿಚಾರಣೆ ವೇಳೆ ಅಸ್ವಸ್ಥಗೊಂಡಿದ್ದ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಸನಗೌಡ ಪಾಟೀಲ್ ಸಾವೀಗಿಡಾಗಿದ್ದಾನೆ. ಈ ಕೇಸ್ ಕಸ್ಟೋಡಿಯಲ್ ಡೆತ್ ಪ್ರಕರಣ ದಾಖಲಿಸಿಕೊಂಡು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES