Wednesday, January 22, 2025

ಸೋಮವಾರವೇ ನಿಗದಿಯಾಗುತ್ತಾ ಓಲಾ ಹಾಗೂ ಉಬರ್ ಪ್ರಯಾಣ ದರ..?

ಬೆಂಗಳೂರು: ಸೋಮವಾರವೇ ನಿಗದಿಯಾಗುತ್ತಾ ಓಲಾ ಹಾಗೂ ಉಬರ್ ಪ್ರಯಾಣ ದರ..? ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಮೂಡುತ್ತಿದೆ. ಮತ್ತೆ ಓಲಾ,ಉಬರ್ ದರ ನಿಗದಿಗೆ ಸಭೆ ಕರೆದ ಸಾರಿಗೆ ಇಲಾಖೆ.

ನವೆಂಬರ್-14 ಮಧ್ಯಾಹ್ನ 3 ಗಂಟೆಗೆ ಸಾರಿಗೆ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದಾರೆ. ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕರು,ಆಟೋ ಚಾಲಕರು,ಓಲಾ ಉಬರ್ ಕಂಪನಿಗಳ ಜೊತೆ ಸಭೆ ನಡೆಯಲಿದೆ. ಓಲಾ,ಉಬರ್ ಬೇಕಾಬಿಟ್ಟಿ ದರ ವಸೂಲಿಗೆ ತಾರ್ಕಿಕ ಅಂತ್ಯ ಕಾಣಿಸಲು ಸಭೆ.

ಈಗಾಗಲೇ ಸಭೆ ನಡೆಸಿ ಪರಿಹಾರಕ್ಕೆ ಸೂಚನೆ ನೀಡಿರೋ ಹೈಕೋರ್ಟ್, ಈಗಾಗಲೇ ಎರಡು ಬಾರಿ ಓಲಾ ಉಬರ್ ಜತೆ ಬರೀ ಕಾಟಚಾರಕ್ಕೆ ಸಭೆ ಮಾಡಿರೋ ಅಧಿಕಾರಿಗಳು. ನ್ಯಾಯಯುತ ಹೊಸ ದರ ನಿಗದಿ ಮಾಡಲು ಅಧಿಕಾರಿಗಳಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಾರಿಗೆ ಇಲಾಖೆ ಸೋಮವಾರ ವೇ ಓಲಾ ಉಬರ್ ಫೈನಲ್ ರೇಟ್ ಫಿಕ್ಸ್ ಮಾಡುವ ಸಾಧ್ಯತೆಯಿದೆ.
ಮಿನಿಮಮ್ ಎರಡು ಕಿ.ಮೀಗೆ 100 ರೂ ದರ ನಿಗದಿ ಮಾಡುವಂತೆ ಕಂಪನಿಗಳು ಡಿಮ್ಯಾಂಡ್ ಮಾಡಲಾಗಿದೆ. ಹೀಗಾಗಿ ಹೊಸ ದರ ನಿಗದಿಗೆ ಮತ್ತೆ ಸಭೆ ಮಾಡುತ್ತಿರುವ ಇಲಾಖೆ ಅಧಿಕಾರಿಗಳು. ಸಾರಿಗೆ ಇಲಾಖೆ ಹೊಸ ದರ ನಿಗದಿಗೆ ತಲೆಬಾಗ್ತವಾ ಅಗ್ರಿಗೇಟರ್ ಸಂಸ್ಥೆಗಳು..? ಸದ್ಯ ಎರಡು ಕೀ ಮೀಟರ್ 30 ರೂ ರೇಟ್ ಫಿಕ್ಸ್ ಮಾಡಿರೋ ಸಾರಿಗೆ ಇಲಾಖೆ.  ಆದ್ರೆ ಇದೀಗ ಎರಡು ಕಿ ಮೀಟರ್ ಗೆ 40 ರಿಂದ 50 ರೂ ಹೊಸ ದರ ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ ಎಮದು ಕೇಳಿಬರುತ್ತಿದೆ.

RELATED ARTICLES

Related Articles

TRENDING ARTICLES