Wednesday, January 22, 2025

ನ- 25ರ ಅಖಾಡದಲ್ಲಿ ರೇಮೊ, ಸ್ಪೂಕಿ & ಗಣಿ ಬಿಗ್ ಕ್ಲ್ಯಾಶ್

ಇಯರ್ ಎಂಡ್​ನಲ್ಲಿ ಬರೋ ಸಿನಿಮಾಗಳೆಲ್ಲಾ ಹಿಟ್ ಆಗುತ್ವೆ ಅನ್ನೋ ಪ್ರತೀಕವಿದೆ. ಅದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಹಾಗಾಗಿಯೇ ರಿಲೀಸ್ ಹೊಸ್ತಿಲಲ್ಲಿರೋ ಸಾಲು ಸಾಲು ಸಿನಿಮಾಗಳು ಒಟ್ಟೊಟ್ಟಿಗೆ ಬಾಕ್ಸ್ ಆಫೀಸ್ ಅಖಾಡಕ್ಕೆ ಇಳಿಯುತ್ತವೆ. ಸದ್ಯ ನವೆಂಬರ್ ತಿಂಗಳಾಂತ್ಯಕ್ಕೆ ಬರ್ತಿರೋ ಮೂರು ಬಹುನಿರೀಕ್ಷಿತ ಸಿನಿಮಾಗಳ ಕ್ಲ್ಯಾಶ್ ಕಹಾನಿ ಇಲ್ಲಿದೆ ನೋಡಿ.

  • ಗಣಿ ತ್ರಿಬಲ್ ರೈಡ್ ವಿರುದ್ದ ಇಶಾನ್ ಮ್ಯೂಸಿಕಲ್ ರೈಡ್..!

ಯೆಸ್.. ಮೂರ್ನಾಲ್ಕು ಸಿನಿಮಾಗಳು ಒಟ್ಟೊಟ್ಟಿಗೆ ಒಂದೇ ವಾರ ತೆರೆಗಪ್ಪಳಿಸೋದು ನಮ್ಮ ಸ್ಯಾಂಡಲ್​ವುಡ್ ಅಂಗಳದಲ್ಲಿ ಹೊಸತೇನಲ್ಲ. ಆದ್ರೆ ಅದ್ರಿಂದ ಥಿಯೇಟರ್ ಕ್ಲ್ಯಾಶ್ ಜೊತೆ ಬಾಕ್ಸ್ ಆಫೀಸ್​ಗೂ ಹೊಡೆತ ಬೀಳುತ್ತೆ ಅನ್ನೋದು ನಿರ್ಮಾಪಕರು ಅರ್ಥೈಸಿಕೊಳ್ಳಲ್ಲ. ಒಂದಕ್ಕಿಂತ ಒಂದು ಡಿಫರೆಂಟ್ ಜಾನರ್ ಅನ್ನೋ ಕಾರಣಕ್ಕೆ ಒಟ್ಟಿಗೆ ಬಂದ್ರೂ ನೋ ಪ್ರಾಬ್ಲಂ ಅಂತಾರೆ.

ಗಾಳಿಪಟ-2 ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಬಳಿಕ ಗೋಲ್ಡನ್ ಸ್ಟಾರ್​ ನಟನೆಯ ತ್ರಿಬಲ್ ರೈಡಿಂಗ್ ಸ್ಯಾಂಪಲ್ಸ್​ನಿಂದ ಅತೀವ ನಿರೀಕ್ಷೆ ಮೂಡಿಸಿದೆ. ಮೂವರು ನಟೀಮಣಿಯರು, ದೊಡ್ಡ ತಾರಾಗಣವಿರೋ ತ್ರಿಬಲ್ ರೈಡಿಂಗ್ ಭರಪೂರ ಮನರಂಜನೆ ನೀಡೋಕೆ ತುದಿಗಾಲಲ್ಲಿದೆ. ಮಹೇಶ್ ಗೌಡ ನಿರ್ದೇಶನದ ಹಾಗೂ ರಾಮ್ ಗೋಪಾಲ್ ನಿರ್ಮಾಣದ ಈ ಸಿನಿಮಾ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು ನವೆಂಬರ್ 25ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದೆ.

ಇತ್ತ ರೋಗ್ ಚಿತ್ರದಿಂದ ಕನ್ನಡಕ್ಕೂ ಸೈ, ತೆಲುಗಿಗೂ ಜೈ ಅಂದಿದ್ದ ಸ್ಯಾಂಡಲ್​ವುಡ್ ಮಿಲ್ಕಿಬಾಯ್ ಇಶಾನ್, ರೇಮೋ ಮೂಲಕ ರಂಜಿಸೋಕೆ ಬರ್ತಿದ್ದಾರೆ. ಗ್ಲಾಮರ್ ಡಾಲ್ ಆಶಿಕಾ ರಂಗನಾಥ್ ಜೊತೆ ಮ್ಯೂಸಿಕಲ್ ಪ್ರೇಮ್ ಕಹಾನಿ ಹೇಳಲಿರೋ ಈ ದೃಶ್ಯಕಾವ್ಯ, ಈಗಾಗ್ಲೇ ಟೀಸರ್, ಟ್ರೈಲರ್ ಮತ್ತು ಸಾಂಗ್ಸ್​ನಿಂದ ವ್ಹಾವ್ ಫೀಲ್ ಕೊಟ್ಟಿದೆ. ಪವನ್ ಒಡೆಯರ್ ಗೂಗ್ಲಿಯನ್ನ ಮತ್ತೊಮ್ಮೆ ನೆನಪಿಸೋ ಅಂತಹ ಚಿತ್ರ ಇದಾಗಲಿದ್ದು, ನವೆಂಬರ್ 25ರಂದೇ ಅಖಾಡಕ್ಕೆ ಇಳಿಯುತ್ತಿದೆ.

  • ಫನ್ & ಲವ್ ಸಿನಿಮಾಗಳ ನಡುವೆ ಹಾರರ್ ಸ್ಪೂಕಿ ಎಂಟ್ರಿ
  • ಇದು ದಿಲ್ ದೋಚಿದ ದಿಯಾ ಖುಷಿಯ ಹೊಸ ಪ್ರಯೋಗ

ಹೌದು.. ಗಣೇಶ್​ರ ತ್ರಿಬಲ್ ರೈಡಿಂಗ್ ಹಾಗೂ ಇಶಾನ್​ರ ರೇಮೋ ಜೊತೆಯಲ್ಲೇ ಸ್ಪೂಕಿ ಕಾಲೇಜ್ ಕೂಡ ತೆರೆಗಪ್ಪಳಿಸುತ್ತಿದೆ. ಇದು ಭರತ್ ನಿರ್ದೇಶನದ ಹಾಗೂ ರಂಗಿತರಂಗ ನಿರ್ಮಾಪಕ ಹೆಚ್​.ಕೆ ಪ್ರಕಾಶ್​ರ ಸಿನಿಮಾ ಆಗಿದ್ದು, ಬಹಳ ದಿನಗಳ ನಂತ್ರ ಕನ್ನಡ ಚಿತ್ರರಂಗದಲ್ಲಿ ನೋಡುಗರನ್ನ ಹೆದರಿಸೋಕೆ ಹಾರರ್ ಜಾನರ್ ಬರ್ತಿದೆ.

ದಿಯಾ ಸಿನಿಮಾದಿಂದ ಎಲ್ಲರ ದಿಲ್ ದೋಚಿದ್ದ ನಟಿ ಖುಷಿ ರವಿ, ಸ್ಪೂಕಿಯಲ್ಲಿ ದೆವ್ವದ ರೂಪ ತಾಳಿದ್ದಾರೆ. ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಸ್ಪೂಕಿ ಕಾಲೇಜ್​ನಲ್ಲಿ ಖುಷಿ ಜೊತೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಪ್ರತಿಭಾನ್ವಿತ ಕಲಾವಿದ ವಿವೇಕ್ ಸಿಂಹ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಮೆಲ್ಲುಸಿರೆ ಸವಿಗಾನದ ಕಹಳೆ ರೀಮಿಕ್ಸ್ ರೂಪದಲ್ಲಿ ಮೊಳಗಲಿದ್ದು, ಈ ಚಿತ್ರ ಕೂಡ ನವೆಂಬರ್ 25ರಂದೇ ಪ್ರೇಕ್ಷಕರ ಮುಂದೆ ಬರ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES