Tuesday, November 19, 2024

ತೆಲಂಗಾಣದಲ್ಲಿ ಮೊಳಗುತ್ತಾ ಕಮಲ ಕಹಳೆ..?

ದಕ್ಷಿಣ ಭಾರತದ ರಾಜ್ಯಗಳನ್ನ ಟಾರ್ಗೆಟ್​ ಮಾಡಿರೋ ಬಿಜೆಪಿ ಒಂದೊಂದೇ ರಾಜ್ಯದಲ್ಲಿ ಕಮಲ ಕಹಳೆ ಮೊಳಗಿಸ್ತಿದೆ. ಈ ನಡುವೆ ತೆಲಂಗಾಣದ ಆಡಳಿತಾರೂಢ TRS ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದಲ್ಲಿ ಅಪಾರ ನಂಬಿಕೆ ಇಟ್ಟಿರುವ ರಾಜಕೀಯ ಪಕ್ಷವು ಜನರಿಗೆ ದ್ರೋಹ ಬಗೆದಿದೆ. ಇದು ರಾಜ್ಯದಲ್ಲಿ ಕಮಲ ಅರಳಲಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಮೋದಿ ಟಿಆರ್‌ಎಸ್ ಹೆಸರು ಹೇಳದೆಯೇ ಕಿಡಿಕಾರಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ಹೇಳಿಕೆ ನೀಡಿದ್ದು, ಕೆ.ಚಂದ್ರಶೇಖರ್ ರಾವ್ ನೇತೃತ್ವದ TRSಗೆ ಸವಾಲು ಹಾಕಲು ಬಿಜೆಪಿ ಮುಂದಾಗಿದೆ.

ರಾಮಗುಂಡಂನಲ್ಲಿ ರಸಗೊಬ್ಬರ ಕಾರ್ಖಾನೆಯನ್ನು ಉದ್ಧಾಟಿಸಲು ಬಂದಿದ್ದ ಮೋದಿ, ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇತ್ತೀಚಿನ ದಿನಗಳಲ್ಲಿ ಯಾವುದೇ ಉಪಚುನಾವಣೆ ನಡೆದರೂ ಸೂರ್ಯೋದಯ ದೂರವಿಲ್ಲ ಎಂಬ ಸಂದೇಶ ಸ್ಪಷ್ಟ ಮತ್ತು ಜೋರಾಗಿ ಕೇಳಿಸುತ್ತಿದೆ. ಕತ್ತಲೆ ಮಾಯವಾಗುತ್ತಿದೆ. ತೆಲಂಗಾಣದಲ್ಲಿ ಎಲ್ಲೆಲ್ಲಿಯೂ ಕಮಲ ಅರಳಲಿದೆ. ತೆಲಂಗಾಣದ ಜನತೆ ಯಾವ ಪಕ್ಷದ ಮೇಲೆ ಅಪಾರ ನಂಬಿಕೆ ಇಟ್ಟಿದ್ದರೋ ಅದೇ ಪಕ್ಷ ತೆಲಂಗಾಣಕ್ಕೆ ದ್ರೋಹ ಬಗೆದಿದೆ. ಆದರೆ ಕತ್ತಲು ಯಾವಾಗ ನಾಲ್ಕು ಕಡೆಯೂ ಆವರಿಸುತ್ತದೆಯೋ ಆಗ ಕಮಲ ಅರಳಲು ಆರಂಭಿಸುತ್ತದೆ ಎಂದು ಮೋದಿ ಹೇಳಿದರು.

RELATED ARTICLES

Related Articles

TRENDING ARTICLES