Monday, December 23, 2024

ಶ್ರೀರಂಗಪಟ್ಟಣ ಅಥವಾ ಮೈಸೂರಿನಲ್ಲಿ ಟಿಪ್ಪುವಿನ 100 ಅಡಿ ಪ್ರತಿಮೆ..!

ಮೈಸೂರು: ಶ್ರೀರಂಗಪಟ್ಟಣ ಅಥವಾ ಮೈಸೂರಿನಲ್ಲಿ ಟಿಪ್ಪುವಿನ 100 ಅಡಿ ಪ್ರತಿಮೆ ನಿರ್ಮಾಣ ಮಾಡಲು ಶಾಸಕ ತನ್ವೀರ್ ಸೇಠ್ ಘೋಷಣೆ ಮಾಡಿದ್ದಾರೆ. ಟಿಪ್ಪು ಜಯಂತಿ ಆಚರಣೆ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತನ್ವೀರ್ ಸೇಠ್, ಟಿಪ್ಪು ಈ ನಾಡಿನ ಸ್ವಾಭಿಮಾನದ ಸಂಕೇತ ಎಂದು ಹೇಳಿದ್ದಾರೆ.

ಟಿಪ್ಪು ಜಯಂತಿ ಜೊತೆ ಕನ್ನಡ ರಾಜ್ಯೋತ್ಸವವನ್ನೂ ಆಚರಿಸುತ್ತಿರುವುದು ಸಂತೋಷದ ವಿಚಾರ, ನಾಡಿನ ಜನರನ್ನು ಒಟ್ಟಿಗೆ ಸೇರಿಸಲು, ಭಾವೈಕ್ಯತೆ ಮೂಡಿಸುವ ದೊಡ್ಡ ಶಕ್ತಿ ಟಿಪ್ಪು ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಇಸ್ಲಾಂನಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ.

ಆದರೂ ಭಾವೈಕ್ಯತೆಯ ಸಂಕೇತವಾಗಿ ಟಿಪ್ಪುವಿನ 100 ಅಡಿ ಪ್ರತಿಮೆಯನ್ನು ಶ್ರೀರಂಗಪಟ್ಟಣ ಅಥವಾ ಮೈಸೂರು ನಗರದಲ್ಲಿ ನಿರ್ಮಿಸಿಯೇ ತೀರುತ್ತೇವೆ. ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ಅನಾವರಣ ಬೆನ್ನಲ್ಲೇ ಟಿಪ್ಪು ಪ್ರತಿಮೆ ನಿರ್ಮಾಣದ ಘೋಷಣೆ ಮಾಡಿರುವ ಶಾಸಕ ತನ್ವೀರ್ ಸೇಠ್ ಈಗ ಚರ್ಚೆಗೆ ವಿಷಯವಾಗಿದ್ದಾರೆ.

RELATED ARTICLES

Related Articles

TRENDING ARTICLES