Sunday, December 22, 2024

ನಾವು ಮನಸ್ಸು ಮಾಡಿದ್ರೆ ಒಬ್ಬ ಬಿಜೆಪಿ ಲೀಡರ್ ಹೊರಗಡೆ ಬರಲ್ಲ; ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಚಿತ್ತಾಪುರ ಕ್ಷೇತ್ರದಲ್ಲಿ ಮಿಸ್ಸಿಂಗ್ ಬಿಜೆಪಿ ಪೋಸ್ಟರ್ ಅಭಿಯಾನ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್​ ಖರ್ಗೆ ನಾವು ಮನಸ್ಸು ಮಾಡಿದ್ರೆ ಒಬ್ಬ ಬಿಜೆಪಿ ಲೀಡರ್ ಸಹ ಊರಲ್ಲಿ ತಿರುಗಾಡಲು ಬಿಡಲ್ಲ ಎಂದಿದ್ದಾರೆ.

ಈ ಬಗ್ಗೆ ಮತನಾಡಿದ ಪ್ರಿಯಾಂಕ್​ ಖರ್ಗೆ, ಕೇವಲ ಚಿತ್ತಾಪುರ ಮತಕ್ಷೇತ್ರ ಅಲ್ಲ ಕಲಬುರಗಿ ಯಾವುದೇ ಒಬ್ಬ ಬಿಜೆಪಿ ನಾಯಕ ಜಿಲ್ಲೆಯಲ್ಲೇ ಓಡಾಡಲು ಬಿಡಲ್ಲ. ಒಬ್ಬನೇ ಒಬ್ಬ ಬಿಜೆಪಿ ಲೀಡರ್ ಕಾಲಿಡಲು ಬಿಡಲ್ಲ ನೆನಪಿಟ್ಕೊಳ್ಳಿ ಎಂದು ಕೇಸರಿ ಪಡೆ ವಿರುದ್ಧ ಪೋಸ್ಟರ್​ ಬಗ್ಗೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ.

ಇಲ್ಲಿವರೆಗೂ ಜಿಲ್ಲೆಯಲ್ಲಿ ಕಾಣೆ ಪೋಸ್ಟರ್​ ನಂತಹ ವಾತಾವರಣ ಇಲ್ಲಿಯವರೆಗೆ ಇರಲೇ ಇಲ್ಲ. ನಮ್ಮ ಕಾರ್ಯಕರ್ತರಿಗೆ ಕೆಣಕಿದ್ರೆ ಸುಮ್ಮನಿರಲ್ಲ. ನನ್ನ ಮರ್ಯಾದೆ ಚೌಕಟ್ಟು ದಾಟಿ ಪಾಠ ಕಲಿಸುವೆ. ನಮ್ಮ ಕುಟುಂಬದ ಮೇಲೆ ವೈಯಕ್ತಿಕ ದಾಳಿ ಮಾಡಲಾಗ್ತಿದೆ. ಖರ್ಗೆ ಸಾಹೇಬ್ರಿಗೆ 6 ಸಲ, ಹಾಗೂ ನನಗೆ 3 ಸಲ ಜೀವ ಬೆದರಿಕೆ ಕರೆ ಬಂದಿದ್ದವು. ಆದರೂ ನಾವು ಸುಮ್ಮನಿದ್ದೇವು, ಆದರೆ ಇದೀಗ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆದಾಗ ಸುಮ್ಮನಿರಲ್ಲ ಎಂದು ಕಲಬುರಗಿ ಜಿಲ್ಲೆ ವಾಡಿ ಪಟ್ಟಣದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಆಡಿದ ಮಾತು ಎಲ್ಲೆಡೆ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES