Monday, December 23, 2024

ಸತೀಶ್ ಜಾರಕಿಹೊಳಿ ವಿರುದ್ಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಾಗ್ದಾಳಿ

ಬೆಳಗಾವಿ: ಹಿಂದೂ ಧರ್ಮದ ಬಗ್ಗೆ ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಶಿವಾಜಿ ಹಾಗೂ ಸಾಂಬಾಜಿ ಮಹಾರಾಜರ ಬಗ್ಗೆ ಸತೀಶ್ ಜಾರಕಿಹೊಳಿ ಆಡಿರುವ ಮಾತುಗಳನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗಮನಿಸಿ, ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ರೀತಿಯ ಬುದ್ದಿಗೇಡಿ ಹೇಳಿಕೆಯನ್ನು ನೀವು ಒಪ್ಪುತ್ತೀರಾ ಎಂದು ಅವರು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿ, ಮುಜುಗರಕ್ಕೆ ಈಡು ಮಾಡಿದ್ದಾರೆ.

ಹಿಂದುತ್ವದ ಬಗ್ಗೆ ವಿವಾದಗ್ರಸ್ತ ಹೇಳಿಕೆ ನೀಡಿದ್ದ ನಿಪ್ಪಾಣಿಯ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲೇ ಸತೀಶ್ ಜಾರಕಿಹೊಳಿ ಈ ಐತಿಹಾಸಿಕ ಸತ್ಯದ ರಹಸ್ಯವನ್ನು ಪ್ರಕಟಿಸಿದ್ದು. ಇದನ್ನು ಗಮನಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸತೀಶ್ ಜಾರಕಿಹೊಳಿಯವರ ಹೇಳಿಕೆಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ರೀತಿಯ ನಾನ್ಸೆನ್ಸ್ ಹೇಳಿಕೆಯನ್ನು ನೀವು ಒಪ್ಪುತ್ತೀರಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಅವರು ಪ್ರಶ್ನಿಸಿದ್ದಾರೆ.

ಸತೀಶ್ ಜಾರಕಿಹೊಳಿಯವರ ಈ ಹೇಳಿಕೆ ಮತ್ತು ದೇವೇಂದ್ರ ಫಡ್ನವೀಸ್​ರ ಪ್ರಶ್ನೆ ಮತ್ತೆ ರಾಜಕೀಯ ರಂಗವನ್ನು ಕಾವೇರುವಂತೆ ಮಾಡಿದ್ದು, ಎರಡೂ ಕಡೆಗಳಿಂದ ಪರವಿರೋಧ ಹೇಳಿಕೆಗಳು ತೀವ್ರಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ನವೆಂಬರ್ 6 ರಂದು ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಹಿಂದೂ ಶಬ್ದ ಪರ್ಶಿಯನ್ ಮೂಲದಿಂದ ಬಂದಿದ್ದು. ಪರ್ಶಿಯನ್ ಭಾಷೆಯಲ್ಲಿ ಅದಕ್ಕೆ ಅಸಹ್ಯಕರ ಅರ್ಥ ಬರುತ್ತದೆ. ಎಲ್ಲಿಂದಲೋ ಬಂದ ಧರ್ಮವನ್ನು ನಮ್ಮ ಮೇಲೆ ಹೇರಿಕೆ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರೇ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆದು ವಿಷಾದ ವ್ಯಕ್ತಪಡಿಸಿದ್ದರು.

 

RELATED ARTICLES

Related Articles

TRENDING ARTICLES