Monday, December 23, 2024

ಧ್ರುವ ಮೆಚ್ಚಿದ ‘ಕೋರ’ ಟೀಸರ್.. ಇದು ಅಕ್ಷರಶಃ ಸುನಾಮಿ

ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿರೋ ಸುನಾಮಿ ಕಿಟ್ಟಿ ಬೆಳ್ಳಿ ತೆರೆಯ ಮೇಲೆ ಕಮಾಲ್​ ಮಾಡೋಕೆ ಬರ್ತಿದ್ದಾರೆ. ಸದ್ಯ, ಸುನಾಮಿ ಕಿಟ್ಟಿಯ ಕೋರ ಟೀಸರ್​​​ ರಿಲೀಸ್​ ಆಗಿದ್ದು ಸೆನ್ಸೇಷನ್​ ಕ್ರಿಯೇಟ್​ ಮಾಡ್ತಿದೆ. ಜೊತೆಗೆ ಸ್ಯಾಂಡಲ್​ವುಡ್​​ ಮಾರ್ಟಿನ್​ ಕೂಡ ಟೀಸರ್​ ಮೆಚ್ಚಿಕೊಂಡಿದ್ದು, ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಯೆಸ್​​.. ಕೋರ ಟೀಸರ್​ ಸ್ಪೆಷಾಲಿಟಿಗಳ ಬಗ್ಗೆ ತಿಳಿಬೇಕಾ..? ಈ ಸ್ಟೋರಿ ಓದಿ.

  • ಭಯಾನಕ ಕಥೆಗೆ ಮುನ್ನುಡಿ.. ಕೋರ ಟೀಸರ್​​ ಅಘೋರ..!

ಬಿಗ್​ ಬಾಸ್​ ಖ್ಯಾತಿಯ ಸುನಾಮಿ ಕಿಟ್ಟಿ ಎಲ್ಲರಿಗೂ ಚಿರಪರಿಚಿತ. ರಿಯಾಲಿಟಿ ಶೋ ಮೂಲಕ ಧಿಡೀರ್​ ಖ್ಯಾತಿ ಗಳಿಸಿಕೊಂಡ ಕಿಟ್ಟಿ ವಿವಾದಗಳಿಂದಲೂ ಸುದ್ದಿಯಾದ್ರು. ಇದೆಲ್ಲದ್ರ ಹೊರತಾಗಿ ಕಿಟ್ಟಿ ತಮ್ಮದೇ ಫ್ಯಾನ್ಸ್​ ಫಾಲ್ಲೊಯೊಂಗ್ ಹೊಂದಿದ್ದಾರೆ.ರಾ ಆಂಡ್​ ರಗಡ್ ಲುಕ್​​ ಇರೋ ಕಿಟ್ಟಿ ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಸದ್ಯ ರಿಲೀಸ್​ ಆಗಿರೋ ಕೋರ ಚಿತ್ರದ ಟೀಸರ್​ ಸಿಕ್ಕಾಪಟ್ಟೆ ಪ್ರಾಮಿಸಿಂಗ್​ ಆಗಿದ್ದು ಧ್ರುವ ಸರ್ಜಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೀಸರ್​ ನೋಡಿದವ್ರಿಗೆ ಇದೊಂದು ಫುಲ್​ ಆಫ್​ ಆ್ಯಕ್ಷನ್​ ಎಂಟರ್​ಟೈನರ್​​ ಸಿನಿಮಾ ಅನಿಸಿದ್ರು, ಎದೆ ಝಲ್ಲೆನಿಸುವ ಅನೇಕ ಸನ್ನಿವೇಶಗಳಿವೆ. ಜೊತೆಗೆ ಮತ್ತೊಂದು ಕಾಡಿನ ಭಯಾನಕ ಕಥೆಯನ್ನು ಈ ಚಿತ್ರದಲ್ಲಿ ತೋರಿಸೋ ಪ್ರಯತ್ನ ಮಾಡಲಾಗಿದೆ. ಯ್ಯುಟ್ಯೂಬ್​​ನಲ್ಲಿ ಹೈಪ್​ ಕ್ರಿಯೇಟ್​ ಮಾಡಿರೋ ಕೋರ ಟೀಸರ್​​ನ ಧ್ರುವ ಸರ್ಜಾ, ಆನಂದ್​ ಗುರೂಜಿ, ಫಿಲ್ಮ್​ ಚೇಂಬರ್​ ಅಧ್ಯಕ್ಷ ಭಾಮಾ ಹರೀಶ್​ ಸೇರಿದಂತೆ ಅನೇಕ ಕಲಾವಿದ್ರ ಸಮ್ಮುಖದಲ್ಲಿ ರಿಲೀಸ್​ ಮಾಡಲಾಯ್ತು.

ಟೀಸರ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಧ್ರುವ ಸರ್ಜಾ ಚಿತ್ರದಲ್ಲಿನ ಆ್ಯಕ್ಷನ್​​​​​​ ಸಿನ್ಸ್​, ಬಿಜಿಎಮ್​​ ಬಗ್ಗೆ ಹೃದಯ ತುಂಬಿ ಮಾತನ್ನಾಡಿದ್ರು. ಒಟ್ಟಾರೆ ರಿಲೀಸ್​ಗೂ ಮುನ್ನವೇ ಸುನಾಮಿಯಷ್ಟೇ ಸ್ಪೀಡ್​​ ಪಡೆದುಕೊಂಡಿದೆ ಕೋರ ಸಿನಿಮಾ.

ಇದ್ರ ಜತೆಗೆ ಕೋರ ಚಿತ್ರಕ್ಕೆ ಆನಂದ್​​​ ಗುರೂಜಿಗಳ ಕೃಪಾಶೀರ್ವಾದ ಕೂಡ ಸಿಕ್ಕಿದ್ದು ಚಿತ್ರಕ್ಕೆ ಪ್ಲಸ್​ ಆಗಿದೆ. ಚಿತ್ರಕ್ಕೆ, ಚಿತ್ರದ ಪಾತ್ರಧಾರಿಗಳಿಗೆ ಅಭಿನಂದನೆ ಸಲ್ಲಿಸಿದ ಗುರುಗಳು ಚಿತ್ರಕ್ಕೆ ಮನಸಾರೆ ಹಾರೈಸಿದ್ರು. ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರಕ್ಕೆ ಪಿ ಮೂರ್ತಿ ಬಂಡವಾಳ ಹೂಡಿದ್ದಾರೆ. ಸೆಲ್ವಮ್​ ಕ್ಯಾಮೆರಾ ಕೈಚಳಕ ಚಿತ್ರಕ್ಕೆ ಪ್ಲಸ್​ ಆಗಿದೆ. ಒಟ್ಟಾರೆ ಕೋರ ಚಿತ್ರಕ್ಕೆ ಆಲ್​ ದಿ ಬೆಸ್ಟ್ ಹೇಳೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES