Monday, December 23, 2024

ಕೊಪ್ಪಳ ಜಿಲ್ಲೆಯಲ್ಲಿ ಗರಿಗೇದರಿದ ರಾಜಕೀಯ ಚಟುವಟಿಕೆಗಳು..!

ಕೊಪ್ಪಳ:ಕೊಪ್ಪಳ ಜಿಲ್ಲೆಯಲ್ಲಿ ಗರಿಗೇದರಿದ ರಾಜಕೀಯ ಚಟುವಟಿಕೆಗಳು. 2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಚ್ಚಿದ ಅಭ್ಯರ್ಥಿಗಳ ಅಬ್ಬರ.

ಗಂಗಾವತಿ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಅರ್ಜಿ ಹಾಗೂ 2 ಲಕ್ಷ ರೂ.‌ ಡಿಡಿ ತುಂಬಿದ ಮಾಜಿ ಎಂಎಲ್ಸಿ ಹೆಚ್.ಆರ್. ಶ್ರೀನಾಥ್. ಸದ್ಯ ಕಾಂಗ್ರೆಸ್ ನಲ್ಲಿ ಟಿಕೆಟ್ ಗಿಟ್ಟಿಸಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಶ್ರೀನಾಥ್ ನಡುವೆ ಟಫ್ ಫೈಟ್ ನಡೆಯುತ್ತಿದೆ. ಕಳೆದ ಕೆಲ‌ ತಿಂಗಳ ಹಿಂದಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶ್ರೀನಾಥ್.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇಪರ್ಡೆಯಾಗಿದ್ದ ಶ್ರೀನಾಥ್.
ಈ ಬಾರಿ ಗಂಗಾವತಿ ಕ್ಷೇತ್ರಕ್ಕೆ ಹಿಂದೂಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯ.ಅನ್ಸಾರಿ VS ಶ್ರೀನಾಥ್ ನಡುವೆ ಯಾರಿಗೆ ಫೈನಲ್ ಆಗುತ್ತೆ ಕಾಂಗ್ರೆಸ್ ಟಿಕೆಟ್ ಎಂಬುದು ಕಾದು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES