Monday, December 23, 2024

ಕಂಬ್ಳಿಹುಳಗೆ ಎಲ್ಲೆಡೆ ಬಹುಪರಾಕ್.. ಕಾಂತಾರ ಕಿಂಗ್​ ಸಾಥ್

ಸೈಲೆಂಟ್​​ ಆಗಿ ಬಂದು ವೈಲೆಂಟ್​ ಆಗಿ ಸೌಂಡ್​ ಮಾಡೋ ಸಿನಿಮಾಗಳ ಸಾಲಿಗೆ ಕಂಬ್ಳಿಹುಳ ಸಿನಿಮಾ ಸೇರಿದೆ. ಎಲ್ಲೆಲ್ಲೂ ಈ ಸಿನಿಮಾ ಬಗ್ಗೆಯೇ ಟಾಕು. ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕರ ಚಪ್ಪಾಳೆ ಸಿಕ್ಕಿದೆ. ಸಿನಿತಾರೆಯರು ಕೂಡ ಸಾಥ್​ ನೀಡಿದ್ದು, ಮಿಸ್​ ಮಾಡದೇ ಸಿನಿಮಾ ನೋಡಿ ಅಂತಿದ್ದಾರೆ. ಅರೆ..! ಅಂತದ್ದೇನಿದೆ ಈ ಸಿನಿಮಾದಲ್ಲಿ ಅಂತೀರಾ..? ಮಿಸ್​ ಮಾಡದೇ ಈ ಸ್ಟೋರಿ ನೀವೇ ಓದಿ.

  • ಸಿನಿರಸಿಕರ ಎದೆಯಲ್ಲಿ ಚಿಟ್ಟೆಯಾದ ಕಥೆಗೆ ಎಲ್ಲೆಡೆ ಜೈಕಾರ

ನಮ್ಮ ಕನ್ನಡ ಚಿತ್ರಪ್ರೇಮಿಗಳಿಗೆ ಹೊಸ ಬಗೆಯ ಫ್ಲೇವರ್​​ ಸಿಕ್ರೆ ಸಾಕು ಬಾಯಿ ಚಪ್ಪರಿಸಿಬಿಡ್ತಾರೆ. ಇನ್ನೂ ಅವರಿಗೆ ಇಷ್ಟ ಆಗ್ಬಿಟ್ರೆ ಸ್ಟಾರ್​ಗಿರಿ ಇರಲಿ, ಇಲ್ಲದೆ ಇರಲಿ ಮುನ್ನುಗ್ಗಿ ಸಿನಿಮಾ ನೋಡ್ತಾರೆ. ಆ ಸಾಲಿಗೆ ಸೇರಿದ ಮತ್ತೊಂದು ಕನ್ನಡ ಸಿನಿಮಾ ಕಂಬ್ಳಿಹುಳ. ಸದ್ಯ ಸೋಶಿಯಲ್​ ಮೀಡಿಯಾಗಳಲ್ಲಿ ನಮ್ಮ ಮಣ್ಣಿನ ಸಿನಿಮಾ ಎಂಬ ಹ್ಯಾಶ್​ಟ್ಯಾಗ್​ ಬಳಸಿ ಸಿನಿಮಾ ನೋಡುವಂತೆ ಅಭಿಯಾನ ಶುರುವಾಗಿದೆ.

ಯೆಸ್​​.. ಸಖತ್​ ಟ್ರೆಂಡಿಂಗ್​ನಲ್ಲಿರೋ ಕಂಬ್ಳಿಹುಳ ಚಿತ್ರತಂಡಕ್ಕೆ ಸಿನಿತಾರೆಯರು ಸಾಥ್​ ನೀಡ್ತಿದ್ದಾರೆ. ಹೊಸಬರ ಪ್ರಯತ್ನಕ್ಕೆ ಸಿನಿತಾರೆಯರೆಲ್ಲಾ ಸಾಥ್​ ನೀಡ್ತಾ ಇರೋದ್ರಿಂದ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಕಳೆದೊಂದು ವಾರದಿಂದ ಸಖತ್ ಸುದ್ದಿಯಲ್ಲಿರುವ ಸಿನಿಮಾ ಕಂಬ್ಳಿಹುಳ. ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಸಿನಿಮಾ ಇದು. ನವೆಂಬರ್ 4ರಂದು ರಾಜ್ಯಾದ್ಯಂತ ತೆರೆಕಂಡ ಈ ಚಿತ್ರ ಪ್ರೇಕ್ಷಕ ಮಹಾ ಪ್ರಭುಗಳ ಹೃದಯ ಮಾತ್ರವಲ್ಲದೇ ಚಂದನವನದ ಸಿನಿ ತಾರೆಯರ ಮನಸೂರೆಗೊಂಡಿದೆ.

ಕಂಬ್ಳಿಹುಳ ಸಿನಿಮಾ ರಾಜ್ಯದೆಲ್ಲೆಡೆ ಸದ್ದು ಮಾಡ್ತಿದ್ದು, ಯೋಗರಾಜ್ ಭಟ್, ಜಯತೀರ್ಥ, ಬಿಎಂ ಗಿರಿರಾಜ್, ಕಿರಣ್‌ ರಾಜ್, ಧನಂಜಯ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಅನೇಕರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ. ಈಗ ಈ ಸಾಲಿಗೆ ರಿಷಬ್ ಶೆಟ್ಟಿ ಕೂಡ ಸೇರಿದ್ದು ಸದ್ಯದಲ್ಲೇ ಸಿನಿಮಾ ನೋಡೋದಾಗಿ ಟ್ವೀಟ್​ ಮಾಡಿದ್ದಾರೆ.

ಚಿತ್ರದ ನಾಯಕ ಅಂಜನ್ ನಾಗೇಂದ್ರ ಹಾಗೂ ನಾಯಕಿ ಅಶ್ವಿತಾ ಹೆಗ್ಡೆ ಆ್ಯಕ್ಟಿಂಗ್​​ ಬಗ್ಗೆ ಚಿತ್ರಪ್ರೇಮಿಗಳು ಕ್ಲೀನ್​ಬೋಲ್ಡ್​ ಅಗಿದ್ದಾರೆ. ಕೊಪ್ಪ ತಾಲೂಕಿನ ಕಮ್ಮರಡಿಯ ಸಮೀಪದ ಕುಡಿನಲ್ಲಿ ಗ್ರಾಮದ ಪ್ರತಿಭೆ ನವನ್ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಮಲೆನಾಡಿನ ಸುತ್ತಾಮುತ್ತಾ ಶೂಟಿಂಗ್ ಆಗಿರೋ ಕಂಬ್ಳಿಹುಳಕ್ಕೆ ಫುಲ್​ಮಾರ್ಕ್ಸ್​​ ಸಿಕ್ಕಿದೆ. ಒಟ್ಟಾರೆ ಕನ್ನಡ ಸಿನಿಮಾಗಳ ಅಬ್ಬರ ಈ ಚಿತ್ರದ ಮೂಲಕವೂ ಮುಂದುವರೆದಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES