Monday, December 23, 2024

ನಾಳೆಯಿಂದ 2 ದಿನಗಳ ಕಾಲ ಡಿ.ಕೆ ಶಿವಕುಮಾರ್ ಹೊರ ರಾಜ್ಯ ಪ್ರವಾಸ

ಬೆಂಗಳೂರು: ನಾಳೆಯಿಂದ 2 ದಿನಗಳ ಕಾಲ ಡಿ.ಕೆ ಶಿವಕುಮಾರ್ ಹೊರ ರಾಜ್ಯ ಪ್ರವಾಸ ಮಾಡಲಿದ್ದಾರೆ. ನಾಳೆ ಬೆಳಗ್ಗೆ 7:30 ಕ್ಕೆ ಬೆಂಗಳೂರಿನಿಂದ ಮಧ್ಯಪ್ರದೇಶದ ಇಂಧೋರ್ ಗೆ ತೆರಳಲಿರುವ ಡಿಕೆಶಿ. ಇಂಧೋರ್ ಯಿಂದ ನೇರವಾಗಿ ಮಹಾಕಾಲೇಶ್ವರ ದೇವಾಲಯಕ್ಕೆ ತೆರಳುವ ಡಿಕೆಶಿ.

ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರನ ದರ್ಶನ ಪಡೆದು, ನಾಳೆ ಉಜ್ಜಯಿನಿ ಯಲ್ಲಿಯೇ ಡಿ.ಕೆ ಶಿವಕುಮಾರ್ ವಾಸ್ತವ್ಯ ಮಾಡಲಿದ್ದಾರೆ. ಸೋಮವಾರ 11:30 ಕ್ಕೆ ಇಂಧೋರ್ ನಿಂದ ದೆಹಲಿ ತೆರಳಲಿದ್ದು, ಮಧ್ಯಾಹ್ನ 1 ಗಂಟೆಗೆ ದೆಹಲಿ ತಲುಪಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.

ಡಿಕೆಶಿಗೆ ಇಡಿ ನೊಟೀಸ್ ಹಿನ್ನೆಲೆ, ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

RELATED ARTICLES

Related Articles

TRENDING ARTICLES