Monday, December 23, 2024

ಆತ್ಮ ವಿಶ್ವಾಸ ಹೆಚ್ಚಿಸಲು ದೈವ ಪ್ರೇರಣೆ ಸಹಕಾರಿ

ಚಿಕ್ಕಬಳ್ಳಾಪುರ: ವೈದ್ಯೋ ನಾರಾಯಣ ಎಂದು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ರೋಗ ಪರಿಹಾರ ವಿಚಾರದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು ದೈವ ಪ್ರೇರಣೆ ಸಹಕಾರಿ ಆಗಲಿದೆ ಎಂದು ಧಾತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ.ಪ್ರಶಾಂತ್ ಕುಮಾರ್ ಅಭಿಮತ ವ್ಯಕ್ತಪಡಿಸಿದ್ದಾರೆ.

ಬಾಗೇಪಲ್ಲಿ ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಧಾತ್ರಿ ಸೇವಾ ಟ್ರಸ್ಟ್ವತಿಂದ ಹಮ್ಮಿಕೊಂಡಿದ್ದ ಗಣೇಶ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮವನ್ನು ವೇದ ಪಂಡಿತ್ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಗಡಿದಂ ಅಶ್ವತ್ಥನಾರಾಯಣ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ನೇರವೇರಿಸಲಾಯಿತು.

ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ನಡೆದ ಗಣೇಶ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಕಳಶ ಮೆರವಣಿಗೆ, ಶಾಂತಿ ಹೋಮ, ಶನೈಶ್ಚರ ಸ್ವಾಮಿ ಪೂಜೆ, ಲಕ್ಷ್ಮೀ ಪೂಜೆ, ಗಣಪತಿ ಪೂಜೆ, ರಕ್ಷಾ ಬಂಧನ, ಅಖಂಡ ಧೀಪ ಸ್ಥಾಪನೆ, ಪಂಚಗವ್ಯ, ರೋಗ ನಿವಾರಣ ಹೋಮ, ನವಗ್ರಹ ಆರಾಧನೆ, ಮೂಲ ವಿಗ್ರಹಕ್ಕೆ ವಿಶೇಷ ಅಭಿಷೇಕ, ದೇವರ ಹೋಮ ಸೇರಿದಂತೆ ಇತ್ಯಾದಿ ಧಾರ್ಮಿಕ ಕೈಂಕರ್ಯ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು.

ಗಣೇಶ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಪವರ್ ಟಿ.ವಿ.ಮುಖ್ಯಸ್ಥ ರಾಕೇಶ್ ಶೆಟ್ಟಿ
ಕುಟುಂಬದವರಿಂದ ತೀರ್ಥಪ್ರಸಾದ, ಉಪಾಹಾರ ವಿನಿಯೋಗಿಸಿ, ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಸಾರ್ವಜನಿಕ ಆಸ್ಪತ್ರೆ ವೈಧ್ಯಾಧಿಕಾರಿ ಡಾ.ರಾಮಾಂಜನೇಯ, ಪ್ರಜ್ಞಾ ರಾಕೇಶ್‌ ಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡ, ಸದಸ್ಯ ಎಸ್.ಟಿ.ಡಿ ಮೂರ್ತಿ, ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸುಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪಿ.ಮಂಜುನಾಥರೆಡ್ಡಿ, ಬಿಳ್ಳೂರು ಕೆ.ಎಂ.ನಾಗರಾಜು, ಯುವ ಮುಖಂಡರಾದ ಕರವೇ ಅನಿಲ್ ಕುಮಾರ್, ಸುನೀಲ್, ಅಂಬರೀಶ್, ಮತ್ತಿತರರು ಇದ್ದರು.

RELATED ARTICLES

Related Articles

TRENDING ARTICLES