Wednesday, January 22, 2025

‘ಸರ್ಕಾರಿ ದುಡ್ಡು,ಜನರ ದುಡ್ಡಲ್ಲಿ ಬಿಜೆಪಿ ಕಾರ್ಯಕ್ರಮ.’

ಮಂಡ್ಯ:ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಪಕ್ಷಗಳು ಚುನಾವಣೆಯ ಮೂಲಕ ಅಧಿಕಾರದ ಚುಕ್ಕಾಣಿಯಿಡಿಯಲು ಹರಸಾಹಸ ಪಡುತ್ತಿದೆ.

ಈ ನಿಟ್ಟಿನಲ್ಲಿ ಒಬ್ಬರ ಮೇಲೊಬ್ಬರಂತೆ ವಾಕ್​ಸಮರ ಶುರು ಮಾಡಿದ್ದಾರೆ. ಈ ಕುರಿತು ಮಾತನಾಡಿರುವ  ಬಿಜೆಪಿ ವಿರುದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ HDD ಆಹ್ವಾನದ ವಿಚಾರವಾಗಿ ಮಂಡ್ಯದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಪಕ್ಷತೀತವಾಗಿ ಕರೆಯಬೇಕಿತ್ತು.
ಬಿಜೆಪಿ ಕಾರ್ಯಕ್ರಮ ಮಾಡದಿದ್ದರೆ. ಮಾಜಿ ಪ್ರಧಾನಿ HDD ಅವರನ್ನು ಕರೆಯಬೇಕಿತ್ತು.ಚುನಾವಣಾ ಉದ್ದೇಶದಿಂದ ನರೇಂದ್ರ ಮೋದಿ ಕರೆಸಿದ್ದಾರೆ. ಪಕ್ಷದ ಕಾರ್ಯಕ್ರಮವನ್ನ ಸಿಎಂ ಮಾಡಿದ್ದಾರೆ.

ಸಚಿವ ಸಂಪುಟ ಅಶ್ವಥ್ ನಾರಾಯಣ, ಅಶೋಕ್, ಸುಧಾಕರ್ ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆ.ಸರ್ಕಾರಿ ದುಡ್ಡು, ಜನರ ದುಡ್ಡಲ್ಲಿ ಮಾಡಿದ್ದಾರೆ.ಈ ತರಹದ ಕಾರ್ಯಕ್ರಮವನ್ನ ಪಕ್ಷತೀತವಾಗಿ ಮಾಡಬೇಕು. ಮಾಜಿ ಪ್ರಧಾನಿ ದೇವೇಗೌಡರ ಆಹ್ವಾನ ಮಾಡದಿರುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES