Monday, December 23, 2024

ಎಲೆಕ್ಟ್ರಿಕ್ ಬಸ್ಗಳು ಬಿಎಂಟಿಸಿಗೆ ವರವೋ..ಶಾಪವೋ..?

ಬೆಂಗಳೂರು:ಬಿಎಂಟಿಸಿಯನ್ನ ಲಾಭದ ಹಳಿಗೆ ತರ್ತಿವಿಯ್ಯಾ ಬಹುಕೋಟಿ ಐಷಾರಾಮಿ ಎಲೆಕ್ಟ್ರಿಕ್ ಬಸ್..?ಡಿಸೇಲ್ ಬಸ್ಕ್ಮಿಂತ ಎಲೆಕ್ಟ್ರಿಕ್ ಬಸ್ಗಳ ಸಂಚಾರ ಬಿಎಂಟಿಸಿಗೆ ಅಗ್ಗವಾಯ್ತಾ‌.? ಡಿಸೇಲ್ ಬಸ್ಗೆ ಪ್ರತಿ ಕಿಮೀಟರ್ ಖರ್ಚು ಆಗುತ್ತಿತ್ತು 65 ರೂಪಾಯಿಗಳು. ಆದ್ರೆ ಎಲೆಕ್ಟ್ರಿಕ್ ಬಸ್ಗೆ ಪ್ರತಿ ಕಿ ಮೀಟರ್ ಗೆ ಖರ್ಚು ಆಗ್ತಿರೋದು 51 ರೂಪಾಯಿ. ಹೀಗಾಗಿ ಎಲೆಕ್ಟ್ರಿಕ್ ಬಸ್ ಗಳ ಖರೀದಿಯಿಂದ ನಷ್ಟದಿಂದ ಪಾರಾಗ್ತಿದೆ ಎನ್ನುತ್ತಿದೆ ಬಿಎಂಟಿಸಿ.

ಮುಳುಗುವ ಬಿಎಂಟಿಸಿಯನ್ನ ಮೇಲೆತ್ತಲು ಮೂರನೇಯ ಬ್ಯಾಚ್‌ ನಲ್ಲಿ 921 ಬಸ್ ಖರೀದಿ ಮಾಡಲಾಗಿದ್ದು, ಈಗಾಗಲೇ ಮೊದಲ ಹಾಗೂ ಎರಡನೇ ಬ್ಯಾಚ್ನಲ್ಲಿ ಖರೀದಿ ಮಾಡಿರೋ ಬಸ್ಗಳಿಂದ ನಗರದಲ್ಲಿ ,300 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಸಂಚಾರವಾಗಲಿದೆ.
ಬಿಎಂಟಿಸಿ ಹೊರೆ ಪ್ರಮಾಣವನ್ನು ದಿನೇ ದಿನೇ ತಗ್ಗಿಸುತ್ತಿವೆ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆ. ನಷ್ಟ ದಿಂದ ಪಾರಾಗಲು ಬೂಸ್ಟರ್ ಡೋಸ್ ಕೊಟ್ಟ ಎಲೆಕ್ಟ್ರಿಕ್ ಬಸ್.

ಡಿಸೇಲ್ ಬಸ್ಗಳಿಂದ ಆಗ್ತಿರೋ ನಷ್ಟ ವನ್ನ ತಗ್ಗಿಸುವ ಉದ್ದೇಶದಿದಂದ ಎಲೆಕ್ಟ್ರಿಕ್ ಬಸ್ಗೆ ಹೆಜ್ಜೆ ಇಟ್ಟಿರೋ ನಿಗಮ, ಎಲೆಕ್ಟ್ರಿಕ್ ಬಸ್ ಗಳ ಖರೀದಿಯಿಂದ ಲಾಭದ ಹಳಿಯತ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. ಡಿಸೇಲ್ ಬಸ್ಕ್ಕಿಂತ ಎಲೆಕ್ಟ್ರಿಕ್ ಬಸ್ಗಳೇ ಸೂಕ್ತ ಅನ್ನೋ ನಿರ್ಧಾರಕ್ಕೆ ಬಂದ ನಿಗಮ. ಹೀಗಾಗಿ 2030 ವೇಳೆಗೆ ಬೆಂಗಳೂರು ‘ಎಲೆಕ್ಟ್ರಿಕ್’ ಮಯಗೆ ಪ್ಲಾನ್ ರೂಪಿಸಿರೋ ಬಿಎಂಟಿಸಿ.

RELATED ARTICLES

Related Articles

TRENDING ARTICLES