ಗದಗ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಳ್ಳ ಹಿಡಿದಿದೆ. ಬಡವರ ಪಾಲಿನ ಅನ್ನಭಾಗ್ಯ ಅಕ್ಕಿ ಎಗ್ಗಿಲ್ಲದೆ ಕಾಳ ಸಂತೆಯಲ್ಲಿ ಮಾರಾಟವಾಗ್ತಿದೆ. ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆಗೆ ಬ್ರೇಕ್ ಹಾಕಲು, ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಮೇಗಾ ಪ್ಲಾನ್ ಮಾಡಿದ್ದಾರೆ.
ಗದಗ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ವ್ಯವಸ್ಥಿತವಾಗಿ ಅಕ್ರಮ ದಂಧೆಕೋರರು ಬಡವರ ಪಾಲಿನ ಅಕ್ಕಿಯನ್ನು ಮಾರಾಟ ಮಾಡ್ತಾಯಿದ್ದಾರೆ. ಗದಗ- ಬೆಟಗೇರಿ ಅವಳಿ, ನಗರ ಸೇರಿದಂತೆ ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ, ರೋಣ, ನರಗುಂದ ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪದೇ ಪದೇ ಅಕ್ರಮ ಅಕ್ಕಿ ಸಾಗಾಣಿಕೆಯಲ್ಲಿ ಸಿಕ್ಕಿ ಬಿದ್ರೆ ಅಂತವರ ವಿರುದ್ಧ ಯಾವುದೇ ಮುಲಾಜು ಇಲ್ಲದೆ ಗೂಂಡಾ ಕಾಯ್ದೆಯಡಿ ದೂರು ದಾಖಲು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗದಗ ಜಿಲ್ಲೆಯಾದ್ಯಂತ ಒಂದು ವರ್ಷದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಸಾಕಷ್ಟು ಕೇಸ್ ಮಾಡಿದ್ದಾರೆ. ಆದ್ರೂ ಕೂಡಾ ಅಕ್ರಮ ಅಕ್ಕಿ ದಂಧೆ ಮಾತ್ರ ನಿಂತ್ತಿಲ್ಲ ಎನ್ನುವದು ಸಾರ್ವಜನಿಕರ ಆರೋಪವಾಗಿದೆ. ಮಾರ್ಚನಿಂದ ಇಲ್ಲಿಯ ವರೆಗೆ ಜಿಲ್ಲೆಯಾದ್ಯಂತ 17 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, 14 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಹಾಗೇ 15 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆದ್ರೂ ಕೂಡಾ ಅಕ್ರಮ ಪಡಿತರ ಸಾಗಾಣಿಕೆ ದಂಧೆ ನಿಯಂತ್ರಣಕ್ಕೆ ಬರ್ತಾಯಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.
ಬಡವರ ಪಾಲಿನ ಅಕ್ಕಿಯನ್ನು ದಂಧೆಕೋರರು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ಮಟ್ಟ ಹಾಕಲು ಆಹಾರ ಇಲಾಖೆ ಪ್ಲಾನ್ ಮಾಡಿದ್ದಾರೆ. ಅಕ್ರಮವಾಗಿ ಅಕ್ಕಿ ಧಂಧೆಯಲ್ಲಿ ಸಿಕ್ಕಿ ಹಾಕಿಕೊಂಡ್ರೆ, ಗೂಂಡಾ ಕಾಯ್ದೆಯಡಿ ಬಂಧಸಿಲು ಮೇಗಾ ಪ್ಲಾನ್ ಮಾಡಲಾಗಿದೆ. ಇನ್ನಾದ್ರು ಅಕ್ರಮ ದಂಧೆಗೆ ಬ್ರೇಕ್ ಬಿಳುತ್ತಾ ಕಾದುನೋಡಬೇಕಿದೆ.
ಮಹಲಿಂಗೇಶ್ ಹಿರೇಮಠ, ಪವರ್ ಟಿವಿ. ಗದಗ