Sunday, June 30, 2024

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ವೇದಿಕೆ ಸಜ್ಜು?

ಕೋಲಾರ:ಕೋಲಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸ್ಪಧಿ್ಸಬೇಕೆಂದು ಒತ್ತಾಯ ಮಾಡಿದ್ದಾರೆ. ರಮೇಶ್ ಕುಮಾರ್ ನೇತೃತ್ವದ ಕಾಂಗ್ರೆಸ್ ಸಭೆಯಲ್ಲಿ ನಿರ್ಣಯವಾಗಿದೆ.

ಅ.13, ಕೋಲಾರ ಜಿಲ್ಲೆಗೆ ಆಗಮಿಸಲಿರುವ ಸಿದ್ದು.ಮಂದಿರ, ಮಸೀದಿ, ಇಗರ್ಜಿ ದರ್ಶನ ಪಡೆಯುವ ಸಿದ್ದು. ಮಾಜಿ ಸಚಿವ ಬೈರೇಗೌಡರ ಸಮಾಧಿಗೆ ಭೇಟಿ ಕೊಡುವ ಸಿದ್ದು. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗುವ ಸಿದ್ದು. ಬಾದಾಮಿ ಕ್ಷೇತ್ರಕ್ಕೆ ಕೈ ಕೊಡಲಿರುವ ಸಿದ್ದು.

ಸಿದ್ದುಗಾಗಿ ಕೋಲಾರ ಕ್ಷೇತ್ರ ತ್ಯಾಗ ಮಾಡಲಿರುವ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ. ಕೋಲಾರ ಕ್ಷೇತ್ರದಲ್ಲಿ ಸಿದ್ದು ಗೆಲ್ಲಲು ಅನುಕೂಲದ ವರದಿ ಕೇಳಿಬಂದಿದೆ.  ಕೋಲಾರ ಜಿಲ್ಲೆಯ ಆರೂ ಕ್ಷೇತ್ರಗಳಿಗೆ ಸಿದ್ದು ಸ್ಪರ್ಧೆಯಿಂದ ಕಾಂಗ್ರೆಸ್ ಗೆಲ್ಲಲು ಅನುಕೂಲ ಸಾಧ್ಯತೆಯಿದೆ. ಭಾನುವಾರ ನಡೆಯುವ ಕಾಂಗ್ರೆಸ್ ಸಭೆಯ ತೀರ್ಮಾನಕ್ಕೆ ಎದುರು ನೋಡುತ್ತಿರುವ ವಿಪಕ್ಷಗಳು.

RELATED ARTICLES

Related Articles

TRENDING ARTICLES