Monday, May 13, 2024

ಕನ್ನಡದಲ್ಲಿ ಭಾಷಣ ಮಾಡಿ ಕನ್ನಡಿಗರ ಮನಗೆದ್ದ ಪ್ರಧಾನಿ..!

ಬೆಂಗಳೂರು: ಸಾರ್ವಜನಿಕ ಸಮಾವೇಶ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿಯಿಂದ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ.
ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಮಾಜಿ ಸಿಎಂ ಯಡಿಯೂರಪ್ಪ, ನಿರ್ಮಲಾನಂದ ಸ್ವಾಮೀಜಿ, ನಂಜಾವದೂತ ಸ್ವಾಮೀಜಿ.ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ನಾರಾಯಣ ಸ್ವಾಮಿ, ಮಾಜಿ ಸಚಿವ ಸದಾನಂದಗೌಡ ಉಪಸ್ಥಿತಿ.

108 ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರವರು ಸಾರ್ವಜನಿಕ ಸಮವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇನ್ನು ಸಚಿವರಾದ ಅಶ್ವಥ್ ನಾರಾಯಣ್, ಅಶೋಕ್, ಆರಗ ಜ್ಞಾನೇಂದ್ರ, ಎಸ್.ಟಿ ಸೋಮಶೇಖರ್, ಸೋಮಣ್ಣ, ಸುನಿಲ್ ಕುಮಾರ್,ನಾರಾಯಣ ಗೌಡ, ಗೋಪಾಲಯ್ಯ, ಮುನಿರತ್ನ, ಸುಧಾಕರ್‌, ಎಂ.ಟಿ.ಬಿ ನಾಗರಾಜ್ ಭಾಗಿ.

ಇನ್ನು ಸಮಾವೇಶದಲ್ಲಿ ಕನ್ನಡದಲ್ಲಿ ಶುರುಮಾಡಿ, ಬೆಂಗಳೂರಿನ ಪ್ರಗತಿಯ ಬಗ್ಗೆ ಮಾತನಾಡಿದರು. ಹಾಗೂ ಬೆಂಗಳೂರು ಈಗ ಸ್ಟಾರ್ಟ್​ಪ್​ಗಳ ರಾಜಧಾನಿಯಾಗಿದೆ ಎಂದು ಬಹಳ ಹೆಮ್ಮೆಯಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮೈಸೂರು ಮಹಾರಾಜರ ಪೇಟ ತೊಡಿಸಿ, ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಮಾದರಿ ನೀಡಿ ಪ್ರಧಾನಿ ನರೇಂದ್ರ ಮೋದಿಗೆ ಸನ್ಮಾನ ಮಾಡಲಾಯಿತು. ಸಾರ್ವಜನಿಕ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ ಹಾಗೂ ಅಭಿಮಾನಿಗಳು ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES