Monday, December 23, 2024

ಮುಂದುವರೆಯಲಿದೆ ಅಪ್ಪು ಲೆಗಸಿ.. ಅಖಾಡಕ್ಕೆ ಯುವ ರೆಡಿ

ಅಪ್ಪು ಇಲ್ಲದ ದಿನಗಳನ್ನು ಕಳೆಯುವುದೇ ಪರಮಹಿಂಸೆ. ಆದ್ರೆ, ದೊಡ್ಮನೆಯ ಪರಂಪರೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸೋಕೆ ಫ್ಯಾನ್ಸ್​​ ಸದಾ ಕಾಯ್ತಿದ್ದಾರೆ. ಈ ಕನಸು ನನಸು ಮಾಡೋಕೆ ಅಂತ್ಲೇ ರಾಜ್​ ವಂಶದ ಮತ್ತೊಬ್ಬ ಕುಡಿ ಯುವರಾಜ್​​ಕುಮಾರ್​​ ಸಜ್ಜಾಗಿದ್ದಾರೆ. ಯೆಸ್​​​. ಯುವ ರಣಧೀರ ಕಂಠೀರವನ ನ್ಯೂ ವೆಂಚರ್​​​​ ಕಥೆ ಯಾವುದು ಗೊತ್ತಾ..? ಈ ಸ್ಟೋರಿ ಓದಿ.

  • ಸದ್ಯದಲ್ಲೇ ಯುವರಾಜ್​​​​​​​​​​ ಅಭಿಮಾನಿಗಳಿಗೆ ಕಾದಿದೆ ಸರ್​ಪ್ರೈಸ್​

ಸ್ಯಾಂಡಲ್​ವುಡ್​​​​ಗೆ ರಾಜ್​ ಫ್ಯಾಮಿಲಿಯ ಕೊಡುಗೆಯನ್ನು ಪದಗಳಲ್ಲಿ ಬಣ್ಣಿಸಲು ಸಾಲದು. ಕನ್ನಡ ಅಂದ್ರೆ ಡಾ.ರಾಜ್​​ ಎಂಬ ನಾಣ್ಣುಡಿಯ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಜೊತೆಗೆ ಡಾ.ಶಿವರಾಜ್​ ಕುಮಾರ್​​, ಪವರ್​ ಸ್ಟಾರ್​ ಪುನೀತ್​​​​​​, ರಾಘಣ್ಣ, ವಿನಯ್​​​​, ಧನ್ಯ ರಾಮ್​ಕುಮಾರ್​​​ ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಹೋಗುತ್ತೆ. ಈ ನಡುವೆ ಮತ್ತೊಬ್ಬ ಪಾದರಸದಂತ ಪ್ರತಿಭೆ ಕನ್ನಡ ಮಣ್ಣಿನಲ್ಲಿ ಗಟ್ಟಿಯಾಗಿ ಬೇರೂರಲು ಸಜ್ಜಾಗಿದೆ. ಯೆಸ್​​​.. ಇಟ್ಸ್​ ನನ್​ ಅದರ್​ ದ್ಯಾನ್​ ಯುವರಾಜ್​ಕುಮಾರ್​​.

ಕಟ್ಟು ಮಸ್ತಾದ ದೇಹ. ಖಡಕ್​​ ಫಿಟ್​ನೆಸ್​​​. ಹ್ಯಾಂಡ್ಸಮ್​​ ಲುಕ್​ ಇರೋ ರಾಜ್​ ಕುಟುಂಬದ ಕುಡಿ ಯವರಾಜ್​ಕುಮಾರ್​​.ನೋಡಲು ಅಪ್ಪು ಮುಖಚರ್ಯೆಯನ್ನೇ ಹೋಲುವ ಯುವ ಈಗಾಗ್ಲೇ ಯುವ ರಣಧೀರ ಕಂಠೀರವ ಚಿತ್ರದ ಫಸ್ಟ್​​​ ಗ್ಲಿಂಪ್ಸ್​ ಮೂಲಕ ಕುತೂಹಲದ ರಣಕಹಳೆ ಊದಿದ್ದಾರೆ. ಇದ್ರ ಜೊತೆಗೆ ಮತ್ತೊಂದು ಚಿತ್ರದ ಮುನ್ಸೂಚನೆ ಕೊಡೋ ಮೂಲಕ ಕಿಚ್ಚಿನ  ಕಿಡಿ ಹಚ್ಚಿದ್ದಾರೆ.

  • ಯಂಗ್​​ಮ್ಯಾನ್​ ಯುವಗೆ ಪವರ್ ಸ್ಟಾರ್​​ ಮಾಡ್ಬೇಕಿದ್ದ ಚಿತ್ರ
  • ಸದ್ಯದಲ್ಲೇ ಸೆಟ್ಟೇರಲಿದೆ ಸಂತೋಷ್​​- ಯುವ ನ್ಯೂ​​​ ಪ್ರಾಜೆಕ್ಟ್​

ಅದೊಂದು ಕರಾಳ ದಿ. 2021 ಅಕ್ಟೋಬರ್​ 29. ಇಡೀ ಕರುನಾಡು ಬಿಕ್ಕಿ ಬಿಕ್ಕಿ ಅತ್ತ ದಿನ. ಅದೆಷ್ಟೋ ಕನಸುಗಳು ನುಚ್ಚು ನೂರಾದ ದಿನ. ದೇವತಾ ಮನುಷ್ಯನ ಭವಿಷ್ಯದ ಕನಸುಗಳಿಗೆ ಪಾಪಿ ಯಮಕಿಂಕರ ಫುಲ್​ ಸ್ಟಾಪ್​ ಇಟ್ಟ ದಿನ. ಯೆಸ್​​.. ಪವರ್ ಸ್ಟಾರ್​ ಪುನೀತ್​ ರಾಜ್​​ ಕುಮಾರ್​​ ಹಾಗೂ ನಿರ್ದೇಶಕ ಸಂತೋಷ್​​ ಆನಂದ್​ ರಾಮ್​ ಮತ್ತೊಂದು ಸಿನಿಮಾ ಮಾಡೋ ಪ್ಲಾನ್​ ಕೂಡ ಪ್ಲಾಫ್​ ಅಗಿತ್ತು. ಯುವರತ್ನ, ರಾಜಕುಮಾರ ಹಿಟ್​ ಸಿನಿಮಾ ನೀಡಿದ್ದ ಜೋಡಿಯ ಮತ್ತೊಂದು ಕನಸು ನುಚ್ಚು ನೂರಾಗಿತ್ತು.

ಯೆಸ್​​​.. ಅಪ್ಪುಗೋಸ್ಕರ ಮುಡಿಪಾಗಿದ್ದ ಕಥೆಗೆ ರಾಘವೇಂದ್ರ ರಾಜ್​​ಕುಮಾರ್​ ಪುತ್ರ ಯುವ ಫಿಕ್ಸ್ ಆಗಿದ್ದಾರೆ. ಅಭಿಮಾನಿ ವಲಯದ ಒತ್ತಾಸೆ ಮೇರೆಗೆ ಯುವರಾಜ್​ಕುಮಾರ್​​ ನಾಯಕನಾಗಿ ಅಭಿನಯಿಸಲಿದ್ದಾರೆ. ಸದ್ಯ ಈ ಕುರಿತು ಸಂತೋಷ್​ ಆನಂದ್​ ರಾಮ್​ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ   ಸಹೋದರ ಸಮಾನರಾದ ಎಲ್ಲ ಅಭಿಮಾನಿಗಳಿಗೆ ಅತಿ ಶೀಘ್ರದಲ್ಲಿ ನನ್ನ ಹಾಗೂ ಯುವರಾಜ್ ಕುಮಾರ್ ಕಾಂಬಿನೇಶನ್ ಚಿತ್ರದ ಎಲ್ಲ ಮಾಹಿತಿ ಹೊರಬರುತ್ತದೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋ ಕೂಡ ಶೇರ್​ ಮಾಡಿದ್ದಾರೆ.

ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ ರಣಧೀರ ಕಂಠೀರವ’ ಚಿತ್ರ ಸಿದ್ಧವಾಗಿರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ಕೆಲಸಗಳು ವಿಳಂಬ ಆಗಿವೆ. ಇನ್ನು ನಿರ್ದೇಶಕ ಪವನ್​ ಕುಮಾರ್​ ಅವರ ಜೊತೆ ಪುನೀತ್​ ರಾಜ್​ಕುಮಾರ್​ ಅವರು ಅನೌನ್ಸ್​ ಮಾಡಿದ್ದ ‘ದ್ವಿತ್ವ’ ಸಿನಿಮಾ ಏನಾಗಲಿದೆ ಎಂಬ ಕೌತುಕ ಕೂಡ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದ್ರ ನಡುವೆ ಯುವ ನೆಕ್ಸ್ಟ್​ ಪ್ರಾಜೆಕ್ಟ್​​ ಹೈಪ್​ ಕ್ರಿಯೇಟ್​ ಮಾಡಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​​ ಟಿವಿ

RELATED ARTICLES

Related Articles

TRENDING ARTICLES