Monday, December 23, 2024

ಬಿಜೆಪಿ ಪಕ್ಷಕ್ಕೆ‌ ಕಿವಿ‌ಮಾತು ಹೇಳಿದ‌ ವಾಟಾಳ್ ನಾಗರಾಜ್..!

ಚಾಮರಾಜನಗರ‌: ಚಾಮರಾಜನಗರದಲ್ಲಿ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ‌ಹೇಳಿಕೆ. ವಿಧಾನಸಭೆಯಲ್ಲಿ ಹೊಡೆದಾಟ ಆಗುತ್ತೆ, ಮಂತ್ರಿಗಳು, ಮುಖ್ಯಮಂತ್ರಿಗೂ ಹೊಡಿತಾರೆ.‌ ಮುಂದಿನ ಬಾರಿ ವಿಧಾನಸಭೆಗೆ ಯಾವ ರೀತಿ ಶಾಸಕರು ಬರ್ತಾರೆ ಅಂತಾ ಗೊತ್ತಿಲ್ಲ.

ಶಾಸನ ಸಭೆಯಲ್ಲಿ ಹೊಡೆದಾಟ ಆಗತ್ತೆ ಎಂದು ಭವಿಷ್ಯ ನುಡಿದ ವಾಟಾಳ್ ನಾಗರಾಜ್.‌ ಈ ಸಾರಿ ಶಾಸನ ಸಭೆಯಲ್ಲಿ ಹೊಡೆದಾಟ ಆಗತ್ತೆ, ಮಂತ್ರಿಗಳಗೂ ಹೊಡೆಯುತ್ತಾರೆ ಹೆಚ್ಚು ಕಡಿಮೆಯಾದರೇ ಮುಖ್ಯಮಂತ್ರಿಗೂ ಹೊಡಿತಾರೆ. ಆ ವೇಳೆ ಒಬ್ಬ ವಾಟಾಳ್ ನಾಗರಾಜ್ ವಿಧಾನಸಭೆಯಲ್ಲಿ ಇರಬೇಕು. ಸೋಲು-ಗೆಲುವು ಬೇರೆ ವಿಚಾರ ಈ ಬಾರಿ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ತಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ. ತನ್ನನ್ನು ಬೆಂಬಲಿಸಬೇಕು, ಹಣ, ಜಾತಿ, ಧರ್ಮ ನೋಡಬೇಡಿ ನನ್ನ ಕೆಲಸ ನೋಡಿ ಓಟು ಕೊಡಿ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತರನ್ನು ಕಂಡು ಖುಷಿಗೊಂಡ ವಾಟಾಳ್.

ಸರ್ಕಾರ ಅಂಗನವಾಡಿ ಕಾರ್ಯಕರ್ತರು ಎಂಬ ಹೆಸರನ್ನು ಬದಲಿಸಬೇಕು. ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುವ ಅವರನ್ನು ಕಾರ್ಯಕರ್ತರು ಎಂದು ಹೇಳುವುದು ಸರಿಯಲ್ಲ.‌ ಅದರ ಬದಲಿಗೆ ಬೇರೆ ಒಂದು ಹೆಸರನ್ನು ಸರ್ಕಾರ ಕೊಡಬೇಕು ಎಂದು ಅಭಿಪ್ರಾಯಪಟ್ಟ ವಾಟಾಳ್. ರಾಜಕೀಯದಿಂದ ವಿ.ಶ್ರೀನಿವಾಸಪ್ರಸಾದ್ ನಿವೃತ್ತರಾಗಬಾರದು. ಅವರು ನಿವೃತ್ತರಾದರೇ ಅವರ ಪಕ್ಷಕ್ಕೆ ನಷ್ಟ. ಬಿಜೆಪಿ ಪಕ್ಷಕ್ಕೆ‌ ಕಿವಿ‌ಮಾತು ಹೇಳಿದ‌ ವಾಟಾಳ್ ನಾಗರಾಜ್.

ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡಿ ಕಳುಹಿಸಿ ಇನ್ನೂ 6 ವರ್ಷ ಅವರ ಸೇವೆಯನ್ನು ಪಡೆಯಬೇಕು. ಇದರತ್ತ ಅವರ ಪಕ್ಷದ ನಾಯಕರು, ಅವರ ಪಕ್ಷ ಯೋಚಿಸಲಿ.

RELATED ARTICLES

Related Articles

TRENDING ARTICLES