Wednesday, January 8, 2025

ವಿವಾದ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಸಾಗರನಹಳ್ಳಿ ನಟರಾಜ್

ತುಮಕೂರು: ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವ ತಯಾರಿ ಬಗ್ಗೆ ಸುದ್ದಿಗೊಷ್ಠಿ. ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೊಷ್ಠಿ.

ಸುದ್ದಿಗೊಷ್ಠಿಯಲ್ಲಿ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ವಿವಾದಾತ್ಮಕ ಹೇಳಿಕೆ. ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತ.  ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಸಾಗರನಹಳ್ಳಿ ನಟರಾಜ್.ನಮ್ಮಲ್ಲಿ 106 ಉಪ‌ ಪಂಗಡಗಳಿವೆ. ಅವರೆಲ್ಲರೂ ವೀರಶೈವ ಲಿಂಗಾಯತರು. ಇವತ್ತಿನಿಂದ ಯಾರು ಲಿಂಗಾಧಾರಣೆ ಮಾಡ್ತಾರೋ. ಅವರೆಲ್ಲರೂ ವೀರಶೈವ ಲಿಂಗಾಯತರು‌. ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ. ಹಿಂದೂ ಧರ್ಮಕ್ಕೂ, ನಮ್ಮ ಆಚರಣೆಗೂ ತುಂಬಾ ವ್ಯತ್ಯಾಸ ಇದೆ. ನಮ್ಮದೇ ಪ್ರತ್ಯೇಕ ಧರ್ಮ. ಹೇಗೆ ಬೌದ್ಧ ಧರ್ಮ, ಸಿಕ್ ಧರ್ಮ ಅಂತ ಪ್ರತ್ಯೇಕ ಮಾಡ್ತಿರೋ ಹಾಗೇ ನಮಗೂ ಪ್ರತ್ಯೇಕ ಧರ್ಮ ಕೊಡಿ. ಎಂಬಿ ಪಾಟೀಲ್ ಅವರ ಪ್ರತ್ಯೇಕ ಧರ್ಮ ಹೋರಾಟ ಸರಿಯಿದೆ,n ನಮ್ಮಲ್ಲೂ ಸಹ ಆಚರಣೆಗಳು ವಿಭಿನ್ನವಾಗಿವೇ.

ಕೆಲವರಿಗೆ ವಿಭೂತಿ ಧರಿಸೋದು ಇಷ್ಟ ಇಲ್ಲದೇ ಇರಬಹುದು. ಇನ್ನು ಕೆಲವರಿಗೆ ರುದ್ರಾಕ್ಷಿ ಧರಿಸೋದು ಇಷ್ಟ ಇಲ್ಲದೆ ಇರಬಹುದು.
ಇಂತಹವುದೆಲ್ಲಾ ಸೇರಿ ವೀರಶೈವ ಲಿಂಗಾಯತ ಧರ್ಮ. ನಾವು ಸಹ ಹಿಂದೂ ಧರ್ಮದ ಎಲ್ಲಾ ಹಬ್ಬಗಳನ್ನ ಮಾಡುತ್ತೇವೆ. ನಮ್ಮ ಆಚರಣೆ , ಶಾಸ್ತ್ರ, ಸಂಸ್ಕೃತಿ ಬೇರೆ.

ನಾವು ಹಿಂದೂಗಳಲ್ಲ ನಮಗೆ ಪ್ರತ್ಯೇಕ ಧರ್ಮ ಕೊಡಿ ಅಂತ ಕೇಳ್ತಿವಿ. ಸದ್ಯ ಸಮಾವೇಶದಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆ ಮಾಡಲ್ಲ.
ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಕೇಳ್ತಿದಿವಿ‌.
ಯಡಿಯೂರಪ್ಪ ನಾನು ಹಿಂದೂ ಅಲ್ಲ ಅಂತ ಹೇಳೋದು ಬಿಡೊದು ಅವರ ವಯಕ್ತಿಕ ವಿಚಾರ. ಅವರು ಏನ್ ಬೇಕಾದ್ರು ಹೇಳಿಕೊಳ್ಳಲಿ.
ತುಮಕೂರಿನಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವಭಾವಿ ಸಭೆಯ ಸುದ್ದಿಗೊಷ್ಠಿಯಲ್ಲಿ ಗರಹಳ್ಳಿ ನಟರಾಜ್ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES