Wednesday, January 22, 2025

ASI ನಾರಾಯಣಸ್ವಾಮಿ ಪುತ್ರನ ಮೇಲೆ ಗುಂಡಿನ ದಾಳಿ

ಚಿಕ್ಕಬಳ್ಳಾಪುರ: ಪೊಲೀಸ್ ಮನೆಯ ಮೇಲೆ ಕಳ್ಳರು ದಾಳಿ ನಡೆಸಿದ್ದು, ತಡೆಯಲು ಬಂದ ಪೊಲೀಸ್ ಅಧಿಕಾರಿ ಮಗನಿಗೆ ಶೂಟೌಟ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ನಡೆದಿದೆ.

ಪೇರೇಸಂದ್ರ ಗ್ರಾಮದ ಎಎಸ್‍ಐ ನಾರಾಯಣಸ್ವಾಮಿ ಮನೆ ಮೇಲೆ ಕಾರಿನಲ್ಲಿ ಬಂದ ನಾಲ್ವರು ದರೋಡೆಕೋರರು ದಾಳಿ ನಡೆಸಿದ್ದಾರೆ. ಹಣ ದೋಚಲು ಯತ್ನಿಸುತ್ತಿದ್ದ ಕಳ್ಳರನ್ನು ತಡೆಯಲು ನಾರಾಯಣಸ್ವಾಮಿ ಹಾಗೂ ಅವರ ಮಗ ಪ್ರಯತ್ನಿಸಿದ್ದಾರೆ. ಈ ವೇಳೆ ಕಳ್ಳರು ಶೂಟೌಟ್ ಮಾಡಿದ್ದಾರೆ. ಆಗ ನಾರಾಯಣ್‍ಸ್ವಾಮಿ ಹಾಗೂ ಅವರ ಪುತ್ರ ಶರತ್ ಎಂಬವರಿಗೆ ಗುಂಡು ತಗುಲಿದೆ.

ಗುಂಡು ಹಾರಿಸಿ ನಂತರ ನಾರಾಯಣಸ್ವಾಮಿ ಪತ್ನಿ, ಸೊಸೆಯಿಂದ ಮಾಂಗಲ್ಯ ಸರ ದರೋಡೆ ಮಾಡಿದ ಕಳ್ಳರು, ಈ ವೇಳೆ ಅಡ್ಡ ಬಂದ ಶರತ್​ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಎಎಸ್​ಐ ನಾರಾಯಣಸ್ವಾಮಿ ಅವರ ಪುತ್ರ ಶರತ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೆರೇಸಂದ್ರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES