Thursday, January 23, 2025

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ಕಳಪೆ ಕೆಲಸ ಮಾಡಿ, ಮತ್ತೆ ಕಿತ್ತು ಹೋದ್ರೆ ಏನು ಮಾಡೋಣ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಆಗಲಿದ್ದು, ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯ ರಸ್ತೆಗಳು ಡಾಂಬರೀಕರಣಗೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಹಿಂದೆ ಮೋದಿ ಬರುವಾಗ ರಸ್ತೆಗೆ ಡಾಂಬರ್ ಹಾಕಿದ್ರು, ಅವರು ಹೋಗಿ ಒಂದು ವಾರದಲ್ಲಿ ಕಿತ್ತು ಹೋಗಿದ್ದವು ಎಂದರು.

ಮೋದಿಗಾಗಿ ರಸ್ತೆಗಳನ್ನು ಚೆನ್ನಾಗಿ ಮಾಡುವುದಲ್ಲ, ಗುಂಡಿಗಳನ್ನು ಸಹ ಮುಚ್ಚಬೇಕು. ಪ್ರಧಾನಿಯವರು ಬರ್ತಾರೆ ಅಂತ ರಸ್ತೆ ರಿಪೇರಿ ಮಾಡುತ್ತಿದ್ದಾರೆ ನಾನು ಬೇಡ ಎನ್ನಲ್ಲ, ಆದರೆ ಕಳಪೆ ಕೆಲಸ ಮಾಡಿ, ಮತ್ತೆ ಕಿತ್ತು ಹೋದ್ರೆ ಏನು ಮಾಡೋಣ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES