Wednesday, January 22, 2025

ಟ್ರೋಲರ್ಸ್​​​​​​​​​​​​​​ಗೆ ರಶ್ಮಿಕಾ ಲಾಸ್ಟ್​ ವಾರ್ನಿಂಗ್.. ನೋ ಕಮೆಂಟ್ಸ್​​​

ನ್ಯಾಷನಲ್ ಕ್ರಶ್ ರಶ್ಮಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವ್ರು ಸಿನಿಮಾಗಳಷ್ಟೇ ಟ್ರೋಲ್​​ಗಳಿಂದಲೂ ಸಿಕ್ಕಾಪಟ್ಟೆ ಫೇಮಸ್. ಬಿಟ್ಟರೂ ಬಿಡದಂತೆ ಬೆನ್ನು ಹತ್ತಿದ ಬೇತಾಳವಾಗಿ ಟ್ರೋಲರ್​​ಗಳು ರಶ್ಮಿಕಾಗೆ ಕಾಟ ಕೊಡ್ತಿದ್ದಾರೆ. ಎಷ್ಟೇ ಕಾಳಜಿ ವಹಿಸಿ ರಶ್ಮಿಕಾ ಮಾತಾಡಿದ್ರೂ ಸಹ ಟ್ರೋಲರ್​​ಗಳಿಗೆ ಬಕ್ರಿದ್​ ಬಿರಿಯಾನಿ ಆಗಿಬಿಡ್ತಾರೆ. ಇದಕ್ಕೆಲ್ಲಾ ಫುಲ್​ ಸ್ಟಾಪ್​ ಇಡೋಕೆ ರಶ್ಮಿಕಾ ಮೌನ ಮುರಿದಿದ್ದಾರೆ. ಟ್ರೋಲರ್ಸ್​ಗೆ ರಶ್ಮಿಕಾ ಕೊಟ್ಟ ಖಡಕ್​ ವಾರ್ನಿಂಗ್​ ಏನ್​ ಗೊತ್ತಾ..? ನೀವೇ ಓದಿ.

  • ನೆಗೆಟಿವ್​ ಕಮೆಂಟ್ಸ್​​​ಗಳಿಗೆ ಶ್ರೀವಲ್ಲಿ ಎಮೋಷನಲ್​ ರಿಯಾಕ್ಷನ್​

ರಶ್ಮಿಕಾ ಮಂದಣ್ಣ. ಸದ್ಯ ಸೌತ್​ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚ್ತಿರೋ ಬ್ಯುಟಿಫುಲ್​​ ಬೆಡಗಿ. ರಶ್ಮಿಕಾ ಮನೆಬಾಗಿಲಲ್ಲಿ ಅದೃಷ್ಠಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಅನಿಸುತ್ತೆ. ಯಾಕಂದ್ರೆ, ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ. ಕಿರಿಕ್​ ಪಾರ್ಟಿ ಚೆಲುವೆ ಟಾಲಿವುಡ್​​ಗೆ ಎಂಟ್ರಿ ಕೊಟ್ಟಿದ್ದೇ ತಡ ಅವರ ನಸೀಬೆ ಚೇಂಜ್​ ಆಗಿ ಹೋಯ್ತು. ನೋಡ ನೋಡ್ತಿದ್ದಂತೆ ಎಲ್ಲರೂ ಬಾಯಲ್ಲಿ ಬೆರಳಿಡುವಂತೆ ಬೆಳೆದುಬಿಟ್ರು. ಆದ್ರೆ, ಅದ್ಯಾಕೋ ಟ್ರೋಲ್​​​​ ಕಂಟಕದಿಂದ ರಶ್ಮಿಕಾ ಮಾತ್ರ ಹೊರ ಬರೋಕೆ ಸಾಧ್ಯವಾಗ್ತಿಲ್ಲ.

ಟ್ರೋಲ್​​​ ಇರಲಿ, ಮೀಮ್ಸ್​​ ಇರಲಿ, ಸೋಶಿಯಲ್​​ ಮೀಡಿಯಾಗಳಲ್ಲಿ ಬಹುಪಾಲು ರಶ್ಮಿಕಾ ಇದ್ದೇ ಇರ್ತಾರೆ. ಆದ್ರೆ, ಇದೀಗ ಇದಕ್ಕೆಲ್ಲಾ ಫುಲ್​ ಸ್ಟಾಪ್​ ಇಡೋಕೆ ಕೊಡಗಿನ ಕುವರಿ ಡಿಸೈಡ್​ ಮಾಡಿದ್ದಾರೆ. ಭಾವನಾತ್ಮಕ ಸುದೀರ್ಘ ಪತ್ರ ಬರೆದಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ನಲ್ಲಿ ಟ್ರೋಲರ್​ಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟಿರೋ ರಶ್ಮಿಕಾ ಪತ್ರ ಸಖತ್​ ವೈರಲ್​ ಆಗಿದೆ. ಪ್ರತಿಯೊಬ್ರು ನನ್ನನ್ನ ಪ್ರೀತಿಸಬೇಕು ಅಂತಾ ನಿರೀಕ್ಷೆ ಮಾಡ್ತಿಲ್ಲ. ಅಂತಾ ಮನದಾಳದ ಮಾತು ಹಂಚಿಕೊಂಡಿದ್ದಾರೆ.

  • ನನ್ನದಲ್ಲದ ತಪ್ಪಿಗೆ ನನ್ನ ಟ್ರೋಲ್​ ಮಾಡಬೇಡಿ ಅಂದಿದ್ಯಾಕೆ..?
  • ಟ್ರೋಲ್ಸ್​ಗೆ ಬೇಸತ್ತು ಖಿನ್ನತೆಗೆ ಒಳಗಾದ್ರಾ ಕನ್ನಡತಿ ರಶ್ಮಿಕಾ..!?

ಯೆಸ್​​.. ರಶ್ಮಿಕಾ ತುಂಬಾ ಭಾವುಕರಾಗಿಯೇ ಈ ಪತ್ರ ಬರೆದುಕೊಂಡಿದ್ದಾರೆ. ನನ್ನದಲ್ಲದ ತಪ್ಪಿಗೆ ಕೆಲವ್ರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡ್ತಿದ್ದಾರೆ. ನಾನು ಹೇಳದೇ ಇರುವ ಮಾತಿಗೆ ವ್ಯಂಗ ಮಾಡಿ ತಮಾಷೆ ಮಾಡಲಾಗ್ತಿದೆ. ನಾನು ನಿಮ್ಮನ್ನು ರಂಜಿಸೋಕೆ ಎಷ್ಟು ಶ್ರಮ ಪಡ್ತೀನಿ ಅನ್ನೋದು ನಂಗೆ ಮಾತ್ರ ಗೊತ್ತಿದೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ನೆಟ್ಟಿಗರು ಟ್ರೋಲ್​ ಮಾಡ್ತಿರೋದ್ರಿಂದ ಇಂಡಸ್ಟ್ರಿ ಸೇರಿ ಹೊರಗೆ ನನ್ನ ಸಂಬಂಧ ಹಾಳಾಗ್ತಿದೆ ಎಂದಿದ್ದಾರೆ ರಶ್ಮಿಕಾ.

ಇದ್ರ ಜೊತೆಗೆ ರಶ್ಮಿಕಾ ಮಾತು ಮುಂದುವರೆಸಿ, ಈ ಮೂಲಕ ನಾನು ನಿಮ್ಮನ್ನು ಗೆಲ್ಲಲು ಬಂದಿಲ್ಲ. ಈ ರೀತಿ ಮಾಡೋದ್ರಿಂದ ಜನರ ಮೇಲಿನ ನನ್ನ ಭಾವನೆ ಬದಲಾಗುತ್ತೆ ಎಂದು ಅಂದುಕೊಳ್ಳಬೇಡಿ. ಈ ನಂತ್ರವೂ ನಿಮ್ಮ ಮೇಲೆ ಅದೇ ಪ್ರೀತಿ ಇರಲಿದೆ ಎಂದಿದ್ದಾರೆ. ನಿಮ್ಮಂದ್ಲೇ ಈ ಹಂತಕ್ಕೆ ಬೆಳೆದಿದ್ದೇನೆ. ನಿಮ್ಮನ್ನು ಖುಷಿ ಪಡಿಸುವ ಕೆಲಸ ನನ್ನದು ಎಂದು ಎಮೋಷನಲ್​ ಆಗಿ ಮಾತನ್ನಾಡಿದ್ದಾರೆ.  ಪ್ರಶಾಂತವಾದ ನದಿಯ ಮೇಲೆ ಮಾಸ್ಕ್​ ಧರಿಸಿ ಸೈಲೆಂಟ್​ ಆಗಿ ಕೂತಿರುವ ಫೋಟೋ ಕೂಡ ಅಟ್ಯಾಚ್​ ಮಾಡಿದ್ದಾರೆ.

ರಶ್ಮಿಕಾ ಕನ್ನಡದ ಹುಡುಗಿ. ಆದ್ರೇ, ಕಿರಿಕ್​ ಪಾರ್ಟಿ ನಂತ್ರ ರಕ್ಷಿತ್​​ ಶೆಟ್ಟಿ ಜೊತೆ ಮದ್ವೆ ಮುರಿದು ಬಿದ್ದಿದ್ದು ಕೆಲವರಿಗೆ ಸಹಿಸಿಕೊಳ್ಳಲಾಗಿಲ್ಲ ಅನಿಸುತ್ತಿದೆ. ಜೊತೆಗೆ ಕನ್ನಡ ಬಿಟ್ಟು ಪರಭಾಷೆ ಸಿನಿಮಾಗಳಿಗೆ ಕಾಲ್​ಶೀಟ್​ ಕೊಟ್ಟಿದ್ದು ಕೆಲವು ಕನ್ನಡ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿರಬಹುದು. ಅದೇನೆ ಇದ್ರೂ, ಟ್ರೋಲ್ಸ್​ ವಿರುದ್ಧ ಎಲ್ಲೂ ಕೆಟ್ಟದ್ದಾಗಿ ಮಾತನಾಡದೇ, ನಿಮ್ಮನ್ನ ಪ್ರೀತಿಸ್ತೀನಿ ಅಂದಿದ್ದು ರಶ್ಮಿಕಾ ಮುಗ್ಧತೆಗೆ ಸಾಕ್ಷಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES