Monday, December 23, 2024

ಇಂದು ಇಂಗ್ಲೆಂಡ್​-ಭಾರತ ಹಣಾಹಣಿ; ಫೈನಲ್​ಗೆ ಎಂಟ್ರಿಯಾಗುತ್ತಾ ಭಾರತ.?

ಆಸ್ಟ್ರೇಲಿಯಾ: ICC ಪುರುಷರ T-20 ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಎರಡನೇ ಸೆಮಿಫೈನಲ್ ಟಿ-20 ಪಂದ್ಯ ಇಂದು ಇಂಗ್ಲೆಂಡ್​ ತಂಡದ ವಿರುದ್ಧ ಭಾರತ ಆಡಲಿದೆ.

ಅಡಿಲೇಡ್ ಓವಲ್​ ಮೈದಾನದಲ್ಲಿ ನಡೆಯುವ ಇಂದಿನ ಪಂದ್ಯ ಭಾರತೀಯ ಕಾಲಮಾನ ಇಂದು ಮಧ್ಯಾಹ್ನ ಭಾರತೀಯ ಕಾಲಮಾನ 1.30 ಕ್ಕೆ ಆರಂಭವಾಗುವುದು. ಈ ಹಣಾಹಣಿಯಲ್ಲಿನ ವಿಜೇತ ತಂಡವು ಭಾನುವಾರ (ನವೆಂಬರ್ 13) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಟಿ-20 ಚಾಂಪಿಯನ್ ಪ್ರಶಸ್ತಿಗಾಗಿ ಕಾದಾಡ ನಡೆಸಲಿದೆ.

ಎರಡು ಬಲಿಷ್ಠ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. 2007, 2009 ಮತ್ತು 2012ರಲ್ಲಿ ಪರಸ್ಪರ ವಿರುದ್ಧ ಆಡಿವೆ. ಗುರುವಾರ ಆಡಿದರೆ ನಾಲ್ಕು ಬಾರಿ ಮುಖಾಮುಖಿಯಾದಂತಾಗುತ್ತದೆ. ಈವರೆಗಿನ ವಿಶ್ವಕಪ್‌ನ ಮೂರು ಪಂದ್ಯಗಳಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಎರಡು ಬಾರಿ ಜಯ ಸಾಧಿಸಿದೆ ಮತ್ತು ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಒಂದು ಬಾರಿ ಗೆಲುವು ಕಂಡಿದೆ.

 

RELATED ARTICLES

Related Articles

TRENDING ARTICLES