Sunday, December 22, 2024

ಬೌಲರ್​ಗಳ ಹೀನಾಯ ಪ್ರದರ್ಶನ : ಫೈನಲ್​ಗೆ ಲಗ್ಗೆಇಟ್ಟ ಬ್ರಿಟೀಷರು

ಆಸ್ಟೇಲಿಯಾ : ಇಂದು ಟಡಿಲೇಡ್​ನಲ್ಲಿ ನಡೆದ ವಿಶ್ವಕಪ್​ ಟಿ 20 ಪಂದ್ಯದಲ್ಲಿ ಭಾರತ ಹೀನಾಯವಾಗಿ ಪರಾಭಾವಗೊಂಡಿದೆ.

ಟಿ-20 ವಿಶ್ವಕಪ್ ನ ಎರಡನೇ ಸಮಿಫೈನಲ್ ಪಂದ್ಯ ಇಂಗ್ಲೆಂಡ್‌ ವಿರುದ್ದ ಭಾರತ ಪಂದ್ಯವಾಡಿತು. ಆದರೆ ಇಂಗ್ಲೆಂಡ್ ತಂಡ 10 ವಿಕೆಟ್ ಗಳಿಂದ ಭರ್ಜರಿ ಜಯದಾಖಲಿಸಿತು.

ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್, ಮೊದಲಿಗೆ ಬಾರತಕ್ಕೆ ಬ್ಯಾಟಿಂಗ್ ಬಿಟ್ಟಿಕೊಟ್ಟಿತು. ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅರ್ಧ ಶತಕ ಬಾರಿಸಿ ಟೀಮ ಇಂಡಿಯಾಗೆ ನೆರವಾದರು.

ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಇನ್ನೂ ನಾಲ್ಕು ಓವರ್ ಬಾಕಿ ಇರೋವಾಗಲೇ ಗೆಲವಿನ ದಡ ಸೇರಿತು. ಪ್ರಮುಖವಾಗಿ ಇಂಗ್ಲೆಂಡ್ ತಂಡ 1 ವಿಕೆಟ್ ಸಹ ಕಳೆದುಕೊಳ್ಳದೆ ಗೆಲುವು ಸಾಧಿಸಿದ್ದು, ಭಾರತದ ಬೌಲರ್ ಗಳಿಗೆ ಮುಖಭಂಗವಾಯಿತು.

RELATED ARTICLES

Related Articles

TRENDING ARTICLES