ಮಂಡ್ಯ: ಗೃಹಸಚಿವ, ಪೊಲೀಸರ ವಿರುದ್ಧ ಅನ್ನದಾತರ ಆಕ್ರೋಶ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಘಟನೆ ನಡೆದಿದ್ದು, ಕಳೆದ 4 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೃಹ ಸಚಿವ.
ಸಚಿವರಿಗೆ ಮನವಿ ಸಲ್ಲಿಸಲು ಮುಂದಾದ ರೈತರು.
ರೈತರ ಮನವಿ ಆಲಿಸದೆ ಸಚಿವರ ಬೇಜವಾಬ್ದಾರಿತನ ಪ್ರದರ್ಶನ. ಸಚಿವರಿಗೆ ಮನವಿ ಸಲ್ಲಿಸಲು ಮುಂದಾದ ರೈತರ ಮೇಲೆ ಪೊಲೀಸರ ದೌರ್ಜನ್ಯ. ಪೊಲೀಸ್ ದೌರ್ಜನ್ಯದ ವಿರುದ್ಧ ರೈತರ ಆಕ್ರೋಶ. ಸಚಿವರ ಭೇಟಿಗೆ ತೆರಳಿದ್ದ ರೈತರ ಜೊತೆ ಸಿಪಿಐ ಸಂತೋಷ್ ದೌರ್ಜನ್ಯ. ರೈತರನ್ನ ಎಳೆದಾಡಿ ದೂರ ತಳ್ಳಿದ ಆರೋಪ. ಸಿಪಿಐ ಸಂತೋಷ್ ವಿರುದ್ಧ ರೈತರ ಪ್ರತಿಭಟನೆ.
ಏಕವಚನದಲ್ಲೇ ಸಿಪಿಐ ಸಂತೋಷ್ ಗೆ ಹಿಗ್ಗಾಮುಗ್ಗ ತರಾಟೆ.
ಹೆದ್ದಾರಿ ತಡೆದು ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ. ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಕೆಲಕಾಲ ಪ್ರತಿಭಟಿಸಿದ ರೈತರು. ಸಿಪಿಐ ಸಂತೋಷ್ ವಿರುದ್ಧ ಕ್ರಮಕ್ಕೆ ರೈತರ ಪಟ್ಟು. ಪರಿಸ್ಥಿತಿ ಅರಿತು ಸ್ಥಳಕ್ಕಾಗಮಿಸಿದ ಎಸ್ಪಿ ಎನ್.ಯತೀಶ್. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಎಸ್ಪಿ. ಎಸ್ಪಿ ವಿಷಾದದ ಬಳಿಕ ಸಮಾಧಾನಗೊಂಡ ರೈತರು.