Wednesday, January 22, 2025

‘ಗಂಧದ ಗುಡಿ’ ಪ್ರೇಮ ಮೂರ್ತಿಯನ್ನು ಕೊಂಡಾಡಿದ ಬಿಗ್​ಬಿ

ದೊಡ್ಮನೆ ಫ್ಯಾಮಿಲಿ ಜೊತೆ ಬಿಗ್​ ಬಿ ಅಮಿತಾಬ್​ ಒಡನಾಟ ದೊಡ್ಡದು. ಅಪ್ಪು ಕಂಡ್ರೆ ಬಿಗ್​​ಬಿಗೆ ಪಂಚಪ್ರಾಣ. ಅಪ್ಪು ಬಗ್ಗೆ ಬಿಗ್​​ ಬಿ ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ. ಬಾಲ್ಯದ ಸಿಹಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಯೆಸ್​​.. ವಿಶ್ವಮಾನವ, ಪ್ರೇಮದ ಸಾಕಾರ ಮೂರ್ತಿ, ನಗುವಿನ ಒಡೆಯ ಅಪ್ಪು ಬಗ್ಗೆ ಬಿಗ್ ​ಬಿ ಹೇಳಿದ್ದೇನು..? ನೀವೇ ಓದಿ.

  • ಅಪ್ಪು ಪ್ಯೂರ್​​​ ಸ್ಮೈಲ್​​ ಬಗ್ಗೆ ಅಮಿತಾಬ್​ ಬಚ್ಚನ್​ ಹೇಳಿದ್ದೇನು..?

ಅಪ್ಪು ಪುಟ್ಟ ಬಾಲಕನಾಗಿದ್ದ ಕಾಲದಿಂದ್ಲೂ ಅಮಿತಾಬ್​ ಬಚ್ಚನ್​​​ ಜೊತೆ ಪ್ರೀತಿಯ ನಂಟು ಹೊಂದಿದ್ರು. ಭಕ್ತ ಪ್ರಹ್ಲಾದ ಚಿತ್ರದ ಸಮಯದಲ್ಲಿ ಸೆಟ್ಟಿಗೆ ಭೇಟಿ ಕೊಟ್ಟಿದ್ದ ಬಿಗ್​ ಬಿ ಅಪ್ಪು ಎತ್ತಿ ಮುದ್ದಾಡಿದ್ರು. ಜೊತೆಗೆ ಅಮಿತಾಬ್​ ಕಂಡ್ರೆ ಪವರ್ ಸ್ಟಾರ್​​ ಪುನೀತ್​ ರಾಜ್​​​ಕುಮಾರ್​ಗೂ ಪಂಚಪ್ರಾಣ. ಎಲ್ಲರ ಸ್ವಂತ, ಸದಾ ಅನಂತವಾಗಿರೋ ಯುವರಾಜನ ಬಗ್ಗೆ ಅಮಿತಾಬ್​ ಹೃದಯ ತುಂಬಿ ಮಾತನ್ನಾಡಿದ್ದಾರೆ. ಅಪ್ಪು ಕಳೆದ ದಿನಗಳನ್ನು ನೆನಪು ಮಾಡ್ಕೋಳೋಕೆ ಕಷ್ಟ ಆಗುತ್ತೆ ಎಂದಿದ್ದಾರೆ.

ಪ್ರಕೃತಿಯೇ ಸಕಲ ಪಾಠಶಾಲೆ. ಸಕಲ ಜೀವಲೀಲೆಯೂ ಅಲ್ಲೇ ಇದೆ. ಇಂತಹ ವನಸಿರಿಯ ಪರಿಚಯ ಮಾಡಿಸಿದ ಅಪ್ಪು ಗಂಧದ ಗುಡಿ ಚಿತ್ರದ ಬಗ್ಗೆ ಅಮಿತಾಭ್​ ಶುಭ ಹಾರೈಸಿದ್ರು. ಈ ವೀಡಿಯೋ ಪಿಆರ್​​ಕೆ ಯ್ಯುಟ್ಯೂಬ್​​ ಚಾನಲ್​​ನಲ್ಲಿ ರಿಲೀಸ್​ ಆಗಿದ್ದು, ಅಪ್ಪು ಬಗ್ಗೆ ಬಿಗ್​ ಬಿ ಆಡಿರೋ ಮಾತು ಕೇಳಿ ಎಲ್ರು ಭಾವುಕರಾಗಿದ್ದಾರೆ. ಅಪ್ಪು ಅಂದ್​​​ ತಕ್ಷಣ ಅಟ್ರಾಕ್ಟ್​ ಆಗೋ ವಿಚಾರ ಅಂದ್ರೆ, ಪ್ರಿಯವಾದ ಸ್ಮೈಲ್​. ನಾನೆಲ್ಲೆ ಮೀಟ್​ ಆಗಲಿ, ಆ ಮುದ್ದು ನಗು ಸದಾ ಇರ್ತಿತ್ತು. ಹಾಗಾಗಿಯೇ ಲೆಜೆಂಡ್ರಿ ಫ್ಯಾನ್ಸ್​ ಫಾಲ್ಲೋಯಿಂಗ್​ ಹೊಂದಿದ್ದಾರೆ ಎಂದು ಕೊಂಡಾಡಿದ್ರು.

  • ‘ಗಂಧದಗುಡಿ’ ಬಗ್ಗೆ ಅಮಿತಾಬ್​​​​​​​ ಮನಸಿನ ಮಾತೇನು..?
  • ಅಪ್ಪು ನೆನಪನ್ನು ಜೀವಂತವಾಗಿಸಲು ಬಿಗ್​​ಬಿ ಹೇಳಿದ್ದೇನು..?

ನಾನು ಈಗ ಅಪ್ಪು ಕೊನೆ ಸಿನಿಮಾ ಬಗ್ಗೆ ಮಾತನಾಡುತ್ತೇನೆ. ಅಪ್ಪು ಗಂಧದ ಗುಡಿಯಲ್ಲಿ ಅಭಿನಯಸಿಲ್ಲ. ಅವರು ಜೀವಿಸಿ ಹೋಗಿದ್ದಾರೆ. ಕರ್ನಾಟಕದ ಅರಣ್ಯ ಸಂಪತ್ತಿನ ಮಹತ್ವ ಸಾರುತ್ತಲೇ ನಿಮ್ಮನ್ನ ಬೇರೆ ಜಗತ್ತಿಗೂ ಕರೆದುಕೊಂಡು ಹೋಗುತ್ತಾರೆ. ಮ್ಯಾಜಿಕಲ್​ ಜರ್ನಿ ಇದು ಎಂದ್ರು.

ಯೆಸ್​​.. ಅಪ್ಪು ಜೀವಿಸಿ ಹೋದ ಗಂಧದ ಗುಡಿ ಚಿತ್ರಕ್ಕೆ ಅಮಿತಾಭ್ ಬಚ್ಚನ್  ಈ ಮೂಲಕ ಸ್ಪೆಷ್​​ ವಿಶ್​ ಮಾಡಿದ್ದಾರೆ. ಬನ್ನಿ, ಅಪ್ಪುವನ್ನ ನಮ್ಮ ನೆನಪಿನಂಗಳದಲ್ಲಿ ಸದಾ ಜೀವಂತವಾಗಿರಿಸೋಣ ಅಂತಲೂ ಬಚ್ಚನ್ ಹೇಳಿದ್ರು. ಸದ್ಯ ಈ ವೀಡಿಯೋ ಸೋಶಿಯಲ್​​​​​ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಬಿಗ್​​​ ಬಿ ಆಡಿರುವ ಮಾತುಗಳು ಎಲ್ಲರನ್ನು ಭಾವಪರವಶತೆಯಲ್ಲಿ ತೇಲಿಸಿವೆ.

ಗಂಧದ ಗುಡಿ ಪ್ರೀ ರಿಲೀಸ್​ ಇವೇಂಟ್​ಗೆ ಬಿಗ್​ ಬಿ ಬರ್ತಾರೆ ಎನ್ನಲಾಗಿತ್ತು. ಆದ್ರೆ, ಕಾರಣಾಂತರಗಳಿಂದ ಸಾಧ್ಯವಾಗದ ಕಾರಣ ಬಿಗ್​ಬಿ ವೀಡಿಯೋ ಮೂಲಕವೇ ವಿಶ್​ ಮಾಡಿದ್ರು. ಸದ್ಯ ಈ ವೀಡಿಯೋವನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಗ್​​ ಬಿ ಸಂದೇಶಕ್ಕೆ ಹೃತ್ಪೂರ್ವಕ ಧನ್ಯವಾಧಗಳನ್ನು ಅರ್ಪಿಸಿದ್ದಾರೆ. ಈ ಮೂಲಕ ಅಪ್ಪು ಅಭಿಮಾನಿಗಳ ಎದೆಯಲ್ಲಿ ಬಿಗ್​​ಬಿ ಜಾಗ ಮಾಡಿಕೊಂಡಿದ್ದಾರೆ. ಜೊತೆಗೆ ಎಲ್ರೂ ತಪ್ಪದೇ ಸಿನಿಮಾ ನೋಡಿ ಎಂದು ಬಿಗ್​ ಬಿ ಮನವಿ ಮಾಡಿಕೊಂಡಿದ್ದು ವಿಶೇಷವಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್​​ ಟಿವಿ

RELATED ARTICLES

Related Articles

TRENDING ARTICLES