Thursday, December 19, 2024

ಟಿಪ್ಪು ಜಯಂತಿ ಹಿನ್ನೆಲೆ ಆಯೋಜಕರಿಗೆ ನಿಬಂಧನೆಗಳನ್ನು ವಿಧಿಸಿದೆ ಪಾಲಿಕೆ

ಹುಬ್ಬಳ್ಳಿ:ಹುಬ್ಬಳ್ಳಿ – ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಹಿನ್ನೆಲೆ,  ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ.
ಮೈದಾನದ ಹೊರಗೆ ಮತ್ತು ಒಳಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಜಯಂತಿ ಆಚರಣೆಗೆ ಎಂಐಎಂ ಮುಖಂಡ ವಿಜಯ ಗುಂಟ್ರಾಳ ಗೆ ಅನುಮತಿ. ಟಿಪ್ಪು ಜಯಂತಿಗೆ ಅವಕಾಶ ಮಾಡುವಂತೆ ಮನವಿ ಮಾಡಿದ್ದ ಗುಂಟ್ರಾಳ.  ಹಲವು ಷರತ್ತುಗಳನ್ನು ವಿಧಿಸಿ ಅನುಮತಿ ಕೊಟ್ಟಿರೊ ಪಾಲಿಕೆ. 10 ಸಾವಿರ ರೂಪಾಯಿ ಶುಲ್ಕ ಭರಿಸುವಂತೆ ಸೂಚನೆ. 20 ಅಡಿ ಉದ್ದ 30 ಅಡಿ ಅಗಲ ಪೆಂಡಾಲ್ ಹಾಕಲು ಮಾತ್ರ ಅವಕಾಶ.

3#5 ಅಡಿ ಅಳತೆಯ ಟಿಪ್ಪು ಭಾವಚಿತ್ರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಇದರ ಹೊರತಾಗಿ ಬೇರೆ ಯಾವುದೇ ಬಾವುಟ, ಧ್ವಜ, ಭಾವಚಿತ್ರ ಪ್ರದರ್ಶಿಸುವಂತಿಲ್ಲ. ಈದ್ಗಾ ಮೈದಾನದಲ್ಲಿರುವ ಆಸ್ತಿಗೆ ಯಾವುದೇ ಧಕ್ಕೆ ತರಬಾರದು. ಜಯಂತಿ ವೇಳೆ ಗಲಭೆ, ಗೊಂದಲಗಳಿಗೆ ಅವಕಾಶ ಮಾಡಬಾರದು. ಆಯೋಜಕರಿಗೆ ನಿಬಂಧನೆಗಳನ್ನು ವಿಧಿಸಿದೆ ಪಾಲಿಕೆ, ಮಧ್ಯಾಹ್ನ 12 ಗಂಟೆಗೆ ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ.

RELATED ARTICLES

Related Articles

TRENDING ARTICLES