Wednesday, January 22, 2025

ಅಮೃತ್​ ಪೌಲ್, ಡಿವೈಎಸ್​ಪಿ ಶಾಂತಕುಮಾರ್ ಮನೆ ಮೇಲೆ ಇಡಿ ದಾಳಿ.!

ಬೆಂಗಳೂರು: ಬೆಂಗಳೂರಿನ ಒಟ್ಟು 11 ಕಡೆ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಇಂದು ದಾಳಿ ನಡೆಸಿ ಭ್ರಷ್ಟರಿಗೆ ಇಂದು ಬಿಸಿ ಮುಟ್ಟಿಸಿದ್ದಾರೆ.

ನೇಮಕಾತಿ ವಿಭಾಗದ ಮಾಜಿ ಎಡಿಜಿಪಿ ಅಮೃತ್​ ಪೌಲ್, ಡಿವೈಎಸ್​ಪಿ ಶಾಂತಕುಮಾರ್​​ ಮನೆ ಮೇಲೆ ಸೇರಿದಂತೆ ಒಟ್ಟು ಬೆಂಗಳೂರಿನ 11 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮನಿ ಲ್ಯಾಂಡ್ರಿಂಗ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಪಿಎಸ್​ಐ ನೇಮಕಾತಿಯಲ್ಲಿ ಹಗರಣ ಪ್ರಕರಣ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದ ಇಡಿ ಅಧಿಕಾರಿಗಳಿಂದ 11 ಕಡೆಯಲ್ಲಿ ದಾಳಿ ನಡೆಸಿದ್ದಾರೆ. ಸದ್ಯ ಬೆಂಗಳೂರಿನ ಸಹಕಾರನಗರದ ಅಮೃತ್ ಪಾಲ್ ನಿವಾಸದಲ್ಲಿ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES