Monday, January 20, 2025

ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಡಿಕೆಶಿ

ಬೆಂಗಳೂರು:ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ಹಿನ್ನೆಲೆ, ಪ್ರಧಾನಿ ಸಂಚರಿಸುವ ರಸ್ತೆಗಳ ಗುಂಡಿಗಳನ್ನ ಮುಚ್ಚುತ್ತಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಗಳು, ಮೋದಿ ಬರ್ತಿದ್ದಾರೆ ಎಂದು ಗುಂಡಿ ಮುಚ್ಚಲು ಹೊರಟಿದ್ದಾರೆ. ಪ್ರಧಾನಿ ಅವರು ಬೆಂಗಳೂರಿಗೆ ಒಂದು ಪ್ರೈಸ್ ಕೊಟ್ಟು ಹೋಗಲಿ.  ಗುಂಡಿ ನಗರ ಅಂತಾದರೂ ಕರೆಯಲಿ, ಬೆಸ್ಟ್ ಸಿಟಿ ಅಂತ ಅದರಲ್ಲೂ ಕರೆಯಲಿ. ಅವರಿಗೆ ಏನು ಮಾಹಿತಿ ಇದೆಯೋ ಆ ರೀತಿ ಕರಪ್ಶನ್ ಕ್ಯಾಪಿಟಲ್ ಅಂತನಾದ್ರೂ ಕರೆಯಲಿ. ಕಾಲೇಜು ಮಕ್ಕಳನ್ನು ಕಾರ್ಯಕ್ರಮಕ್ಕೆ ಆಹ್ವಾನ ಹೊರಡಿಸಿದ್ದಾರೆ. ಮೋದಿ ಅವರು ಅದನ್ನ ಮುಖ್ಯಮಂತ್ರಿಗಳಿಗೆ ಕೇಳಲಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರಲು ಆದೇಶ ಮಾಡಿದ್ದರು. ಇದು ಸರ್ಕಾರಕ್ಕೆ ಶೇಮ್ ಅಲ್ಲವಾ..?ಇದನ್ನು ನೋಡಿದರೆ ಬಿಜೆಪಿ ವೀಕ್ ಆಗಿದೆ ಎಂದು ಅನಿಸುತ್ತದೆ.

ರಸ್ತೆ ಗುಂಡಿಗೆ ನೂರಾರು ಜನ ಸತ್ತರು, ಎಲ್ಲಾ ಪಾರ್ಟಿಯವರು ಗುಂಡಿಗಳ ಹೋಮ ಮಾಡಿದರು ಪೂಜೆ ಮಾಡಿದ್ರು ಅಭಿಷೇಕ ಮಾಡಿದರು. ಮೋದಿ ಬರ್ತಿದ್ದಾರೆ ಅಂತ ಗುಂಡಿ ಮುಚ್ಚುತ್ತಿದ್ದಾರೆ ಸಂತೋಷ ಎಂದ ಡಿಕೆಶಿ.

RELATED ARTICLES

Related Articles

TRENDING ARTICLES