Monday, December 23, 2024

ನಾನೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ಏಕವಚನದಲ್ಲಿ ಮಾತನಾಡಿದ್ದಾರೆ: ಸುನೀಲಗೌಡ ಪಾಟೀಲ

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಹಶಿಲ್ದಾರ್ ಕಚೇರಿ ಬಳಿ ನಡೆದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ಜಗಳ ತಾರಕಕ್ಕೆ ಏರುವ ಲಕ್ಷಣಗಳು ಕಾಣುತ್ತಿದೆ. ಕಾಂಗ್ರೆಸ್ ಎಂಎಲ್ ಸಿ ಸುನೀಲಗೌಡ ಪಾಟೀಲ ಹಾಗೂ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ‌ ಅಧ್ಯಕ್ಷ ವಿಜುಗೌಡ ಪಾಟೀಲ ನಡುವೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಏಕವಚನ ಬಳಕೆಯ ಜಗಳ ನಡೆದಿತ್ತು.

ಇಂದು ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಿಜುಗೌಡ ಪಾಟೀಲ, ತಳವಾರ ಪರಿವಾರ ಜಾತಿ ಪ್ರಮಾಣ ಪತ್ರ ಆ ಸಮುದಾಯದ ಜನರಿಗೆ ಕೊಡಿಸಲು ಹೋದಾಗ ಎಂಎಲ್ ಸಿ ಅವರು ಬಂದು ಪ್ರೋಟೋ ಕಾಲ ಪ್ರಕಾರ ನಡೆದು ಕೊಳ್ಳಬೇಕು ಎಂದು ಹೇಳಿ ನಾನೊಬ್ಬ ನಿಗಮ ಮಂಡಳಿ ಅಧ್ಯಕ್ಷನೆಂದು ಗೊತ್ತಿದ್ದರೂ ನನ್ನ ಬದಲಿಗೆ ತನ್ನ ಬೆಂಬಲಿಗರನ್ನು ಒಳಗೆ ಕರೆದುಕೊಂಡಿದ್ದಾರೆ. ಶಾಸಕರು ಈ ಪ್ರಮಾಣ ಪತ್ರ ವಿತರಿಸುತ್ತಾರೆ, ಬೇರೆಯವರು ನೀಡುವ ಹಾಗಿಲ್ಲ ಎಂದು ಹೇಳಿದರಲ್ಲದೇ, ನಂತರ ಹೊರಗಡೆ ತಮ್ಮ ವಿರುದ್ಧ ಏಕವಚನ ಪ್ರಯೋಗ ಮಾಡಿ, ಜಗಳ ತೆಗೆದಿದ್ದಾರೆ ಎಂದು ಆರೋಪಿಸಿದರು. ಇದನ್ನು ಜನರೆಲ್ಲ ನೋಡಿದ್ದಾರೆ ಎಂದರು.

ಇನ್ನೂ ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿ ಈ ಘಟನೆ ಬಗ್ಗೆ ಕಾನೂನು ಹೋರಾಟ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದರು. ಇದೇ ವೇಳೆ ಮಾತನಾಡುತ್ತಾ ಇವರು ಹೆದರಿಸಿ ಬಬಲೇಶ್ವರ ಕ್ಷೇತ್ರದೊಳಗೆ ಬರದಂತೆ ನೋಡಿಕೊಳ್ಳಲು ಆಗುವದಿಲ್ಲ, ನಾನು‌ ಮೂರು ಬಾರಿ ಈ ಕ್ಷೇತ್ರದಲ್ಲಿ ಸೋತಿರ ಬಹುದು, ಆದರೆ ಜನರ ಹೃದಯದಲ್ಲಿದ್ದೇನೆ, ಬಬಲೇಶ್ವರ ಕ್ಷೇತ್ರದಲ್ಲಿ ಏನು‌ ಅಭಿವೃದ್ಧಿ ಯಾಗಿದೆ ಎನ್ನುವದನ್ನು ಅಂಕಿ ಅಂಶಗಳ ಮೂಲಕ ಮುಂದಿನ ದಿನದಲ್ಲಿ ಬಿಡುಗಡೆ ಮಾಡುವೆ ಎನ್ನುವ ಮೂಲಕ ಅಭಿ ಪಿಚ್ಷರ್ ಬಾಕಿ ಹೈ ಎಂದರು.

RELATED ARTICLES

Related Articles

TRENDING ARTICLES