Wednesday, January 22, 2025

ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು: ಶಿವಮೂರ್ತಿ

ಚಿತ್ರದುರ್ಗ : ಶಿವಮೂರ್ತಿ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ S.K. ಬಸವರಾಜನ್ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದಾರೆ.​ ತಡರಾತ್ರಿ 1 ಗಂಟೆಗೆ ಪೊಲೀಸರಿಗೆ ಶರಣಾಗಿದ್ದಾರೆ. ಬಸವಪ್ರಭು ನೀಡಿದ ದೂರಿನ ಆಧಾರದಲ್ಲಿ ಇವರ ವಿರುದ್ಧ FIR ದಾಖಲಾಗಿತ್ತು.

ಶಿವಮೂರ್ತಿ ವಿರುದ್ಧ ಪೋಕ್ಸೋ ಕೇಸ್​​ ಕುರಿತ ಚಾರ್ಜ್​​ಶೀಟ್​​ನಲ್ಲಿ ಆರೋಪಿಗಳ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಬಾಲಕಿಯರ ಆರೋಪ ಸುಳ್ಳು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಚಾರ್ಜ್​​ಶೀಟ್​​ನಲ್ಲಿ ಶಿವಮೂರ್ತಿಯ ಸಂಪೂರ್ಣ ಹೇಳಿಕೆ ದಾಖಲಾಗಿದ್ದು, ಅತ್ಯಾಚಾರ ಆರೋಪವನ್ನು ಅಲ್ಲಗಳೆಯಲಾಗಿದೆ. ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿಲ್ಲ. ನನ್ನ ಕೊಠಡಿಗೆ ಯಾರಿಗೂ ಪ್ರವೇಶವಿಲ್ಲ. ಭೇಟಿಗೆ ಬರುವ ಬಾಲಕಿಯರಿಗೆ ಸೇಬು, ಮಾವು ನೀಡ್ತಿದ್ದೆ. ಚಾಕೊಲೇಟ್​ಗಳನ್ನು ಪ್ರಸಾದ ರೂಪದಲ್ಲಿ ನೀಡಿದ್ದೇನೆ. ಆದರೆ ಯಾವುದರಲ್ಲೂ ಮತ್ತು ಬರುವ ಪದಾರ್ಥ ಬೆರೆಸಿಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES