ಬೆಂಗಳೂರು: ಕ್ಯಾಮೆರಾಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ ಮಾಡಿದ ಯಶವಂತಪುರ ಪೊಲೀಸರು. ಇನ್ನು ಪ್ರಜ್ವಲ್ ಎಂಬಾತನ ಬಂದನವಾಗಿದೆ. ಫ್ಲಿಪ್ ಕಾರ್ಟ್, ಮದುವೆ ಮನೆಯಲ್ಲೂ ಕೈಚಳಕ ತೋರಿಸಿದ್ದ ಆರೋಪಿ.
ಸಿಸಿಟಿವಿ ಆಧರಿಸಿ ಪ್ರಜ್ವಲ್ ಬಂಧಿಸಿದ ಯಶವಂತಪುರ ಪೊಲೀಸರು, ಅಕ್ಟೋಬರ್ 25 ರಂದು ಫ್ಲಿಪ್ ಕಾರ್ಟ್ ನಲ್ಲಿ ಕ್ಯಾಮೆರಾ ಬುಕ್ ಮಾಡಿದ್ದ ಆರೋಪಿ.ಯಶವಂತಪುರ ಗಾಯತ್ರಿ ಟೆಂಪಲ್ ಬಳಿ ಡೆಲಿವರಿ ಪಡೆದು ಹಣ ನೀಡದೆ ಎಸ್ಕೇಪ್. ಹಣ ಕೊಡ್ತೀನಿ ಅಂತ ಹೇಳಿ ಅಲ್ಲಿಂದ ಪರಾರಿಯಾಗಿದ್ದ.ಅದೇ ರೀತಿ ಯಶವಂತಪುರದ ಕಲ್ಯಾಣ ಮಂಟಪದಲ್ಲಿ ಕ್ಯಾಮೆರಾ ಕಳ್ಳತನ, ಮದುಮಗನ ಕಡೆಯವನು ಅಂತ ಕ್ಯಾಮರಾಮ್ಯಾನ್ ಪರಿಚಯ ಮಾಡಿಕೊಂಡಿದ್ದ. ಫೋಟೋಕ್ಲಾರಿಟಿ ಚೆಕ್ ಮಾಡ್ತೀನಿ ಅಂತ ಕ್ಯಾಮೆರಾ ಪಡೆದು ಎಸ್ಕೇಪ್ ಆಗಿದ್ದ.
ಇದೇ ರೀತಿ ಇನ್ನೂ ಕೆಲವಡೆ ಕ್ಯಾಮೆರಾ ಕದ್ದ ಕೇಸಲ್ಲಿ ಭಾಗಿಯಾಗಿದ್ದ, ಕ್ಯಾಮೆರಾ ಕಳ್ಳತನದ ಸಿಸಿಟಿವಿ ಪತ್ತೆ ಹಚ್ಚಿ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.