Friday, December 27, 2024

ಅವತಾರ್​​​​-2 ಕನ್ನಡ ಟ್ರೇಲರ್​​ ರಿಲೀಸ್​​​

ಸೃಷ್ಠಿಯ ನಿಯಮಗಳನ್ನು ಮೀರಿ ಅನ್ಯ ಗ್ರಹದ ಅದ್ಭುತ ಲೋಕವನನ್ನು ತೆರೆದಿಟ್ಟಿದ್ದ ಸಿನಿಮಾ ಅವತಾರ್. 2009 ರಲ್ಲಿ ತೆರೆ ಕಂಡಿದ್ದ ಅವತಾರ್ ಅಮೋಘ ದೃಶ್ಯಕಾವ್ಯದೊಂದಿಗೆ ಕಣ್ಮನ ತಣಿಸಿದ್ದಲ್ಲದೆ, ಚಿತ್ರ ವಿಚಿತ್ರ ಪ್ರಾಣಿ, ಪಕ್ಷಿ, ಸಸ್ಯ ಸಂಪತ್ತನ್ನು ತೆರೆಗೆ ಮೇಲೆ ತೆರೆದಿಟ್ಟಿತ್ತು.

ಇನ್ನು, ಇದಾದ 13 ವರ್ಷಗಳ ನಂಥ್ರ ಅವತಾರ್ ಚಾಪ್ಟರ್ ಸಿನಿಮಾ ತೆರೆಗೆ ಬರ್ತಿದೆ. ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರೋದಾಗಿ ಹೇಳಿಕೊಂಡಿದ್ದ ಅವತಾರ್ 2 ಕನ್ನಡ ಭಾಷೆಯನ್ನು ಕಡೆಗಣಿಸಿತ್ತು. ಟ್ವಿಟರ್​ನಲ್ಲಿ ಬಾಯ್ಕಾಟ್ ಅವತಾರ್ ಅಭಿಯಾನ ಶುರುವಾಗ್ತಿದ್ದಂತೆ ಚಿತ್ರತಂಡ ಎಚ್ಚೆತ್ತುಕೊಂಡಿದೆ. ಕನ್ನಡದಲ್ಲೂ ಅವತಾರ್ 2 ಸಿನಿಮಾ ತೆರೆಗೆ ಬರ್ತಿದೆ. ಇದೀಗ ಯ್ಯುಟ್ಯೂಬ್ ನಲ್ಲಿ ಕನ್ನಡದ ಅವತಾರ್ 2 ಟ್ರೈಲರ್ ರಿಲೀಸ್ ಆಗಿದ್ದು ಸಖತ್ ಸೆನ್ಷೇಷನ್ ಸೃಷ್ಠಿ ಮಾಡ್ತಿದೆ.

RELATED ARTICLES

Related Articles

TRENDING ARTICLES