Saturday, May 18, 2024

ಪಿಎಸ್ಐ ಪಾರದರ್ಶಕ ತನಿಖೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯ..!

ಮೈಸೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನಿಡಿದ್ದು, ಸ್ವಾತಂತ್ರ್ಯ ನಂತರ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆಗೆ ಬೇಕಾದ ಮೂಲಸೌಕರ್ಯ ಒದಗಿಸಿದ್ದೇವೆ. ಪೊಲೀಸ್ ವಸತಿಗೆ 200ಕೋಟಿ ವೆಚ್ಚದಲ್ಲಿ 215 ಪೊಲೀಸ್ ಠಾಣೆಗಳನ್ನ ನಿರ್ಮಿಸಿದ್ದೇವೆ ಹಾಗೂ ವ್ಯಪನ್ ಕೊಟ್ಟಿದ್ದೇವೆ.

ಹಿಂದೆ ಇದ್ದ ಸರ್ಕಾರದಲ್ಲಿ 37%ಖಾಲಿ ಹುದ್ದೆಗಳಿತ್ತು.ಆದರೆ ನಮ್ಮ ಸರ್ಕಾರದಲ್ಲಿ ಕೇವಲ 12ಸಾವಿರ ಹುದ್ದೆ ಖಾಲಿ ಇದೆ.
ನಾವು ಬಂದಮೇಲೆ 5ಸಾವಿರ ಕಾನ್ಸ್ಟೇಟೇಬಲ್ ಗಳ ನೇಮಕ ಮಾಡಿದ್ದೇವೆ. ಹರಿಯಾಣದಲ್ಲಿ ನಡೆದ ಕಾನ್ಫಿರೆನ್ಸ್ ನಲ್ಲಿ ಕರ್ನಾಟಕ ಪೊಲೀಸ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿಯ ಆನ್ಲೈನ್ ಪೋಲೀಸ್ ಎಫ್ ಐ ಆರ್ ದಾಖಲು ವ್ಯವಸ್ಥೆ, ಇನ್ವೆಸ್ಟಿಗೆಷನ್ ವಿಧಾನ, 112 ಹೆಲ್ಪ್ ಲೈನ್ ವ್ಯವಸ್ಥೆ ಎಲ್ಲಾ ಉತ್ತಮವಾಗಿದೆ. 112ನಲ್ಲಿ ಕರೆ ಮಾಡಿದ 9 ನಿಮಿಷದಲ್ಲಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇವೆ.
ಇದೀಗ ಸೈಬರ್ ವಿಭಾಗವನ್ನು ಬಲಪಡಿಸಲಾಗಿದೆ. ಮೈಸೂರು ಪ್ರವಾಸಿತಾಣವಾಗಿರುವ ಕಾರಣ ಇಲ್ಲಿ ಕಾನೂನು ವ್ಯವಸ್ಥೆಗೆ ಹೆಚ್ಚು ಗಮನ ವಹಿಸಲಾಗಿದೆ.

ಪಿಎಸ್ಐ ಅಕ್ರಮ ನೇಮಕಾತಿ ವಿಚಾರ. ಪ್ರಕರಣ ಸಿಐಡಿ ತನಿಖೆಯಲ್ಲಿದೆ. ತನಿಖೆ ಪ್ರಗತಿಯಲ್ಲಿದೆ. ಪಾರದರ್ಶಕವಾಗಿ ತನಿಖೆ ನಡೆಸಬೇಕು.ಪ್ರಕರಣದಲ್ಲಿ 106 ಮಂದಿ ಕಸ್ಟಡಿ ನಲ್ಲಿದ್ದಾರೆ. ಪ್ರಾಮಾಣಿಕರಿಗೆ ಅನ್ಯಾಯವಾಗಿರುವ ವಿಚಾರ. ಪ್ರಕರಣ ನ್ಯಾಯಾಲಯದಲ್ಲಿದೆ ಸಿಓಡಿ ತನಿಖೆಯಲ್ಲಿದೆ. ಈ ಹಿನ್ನೆಲೆ ಈ ಬಗ್ಗೆ ನಾನೇನು ಹೇಳಲಾಗುವುದಿಲ್ಲ.ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ. ಆನಹಳ್ಳಿಯಲ್ಲಿ ನೂತನ ಪೋಲಿಸ್ ಠಾಣೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ.

RELATED ARTICLES

Related Articles

TRENDING ARTICLES