Sunday, January 19, 2025

ಶಿವಣ್ಣ ನ್ಯೂ ರೆಕಾರ್ಡ್.. ವೆಪನ್ಸ್​ ಟೀಸರ್​ಗೆ ‘ವೇದ’ ನಾಂದಿ..!

ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಟ್ರೆಂಡ್​ಸೆಟ್ ಮಾಡೋದ್ರಲ್ಲಿ ಮಾಸ್ಟರ್. ಅವ್ರ ಸಿನಿಮಾಗಳು ಬರೆದ ದಾಖಲೆಗಳು ಮತ್ಯಾವ ಸ್ಟಾರ್ ಕೂಡ ಮಾಡಲಾರ ಅನ್ನೋ ಅಷ್ಟರ ಮಟ್ಟಿಗೆ ಸುದ್ದಿಯಲ್ಲಿರ್ತಾರೆ. ಸದ್ಯ ಅವ್ರ 125ನೇ ಸಿನಿಮಾ ವೇದ ಕೂಡ ಅಂಥದ್ದೇ ಮತ್ತೊಂದು ನೂತನ ದಾಖಲೆ ಬರೆಯಲು ತುದಿಗಾಲಲ್ಲಿ ನಿಂತಿದೆ. ಅದೇನು ಅಂತೀರಾ..? ನೀವೇ ಓದಿ.

  • ಇಂಡಿಯನ್ ಕಮಲ್ ಲುಕ್​ನಲ್ಲಿ ಶಿವಣ್ಣ 125ನೇ ಚಿತ್ರದ ಲುಕ್

ಭಜರಂಗಿ 2, ಬೈರಾಗಿ ಆಯ್ತು. ಇದೀಗ ವೇದ ಸಿನಿಮಾದೇ ಅಬ್ಬರ, ಆಡಂಬರ. ಯೆಸ್.. ದೊಡ್ಮನೆ ಫ್ಯಾನ್ಸ್ ಎಲ್ಲಾ ಶಿವರಾಜ್​ಕುಮಾರ್​ರ 125ನೇ ಸಿನಿಮಾ ವೇದ ಅಪ್ಡೇಟ್ಸ್​ಗಾಗಿ ಬಹಳ ಕಾತರರಾಗಿರ್ತಾರೆ. ಕಾರಣ ಇದು ಅವ್ರದ್ದೇ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್​ನಡಿ ತಯಾರಾಗ್ತಿರೋ ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ.

ಇಂಡಿಯನ್ ಚಿತ್ರದಲ್ಲಿ ಕಮಲ್ ಹಾಸನ್ ಗೆಟಪ್​ನಲ್ಲಿರೋ ಶಿವಣ್ಣ, 60ರ ದಶಕದ ರಕ್ತಸಿಕ್ತ ಕಥೆಯನ್ನ ಹೇಳಲು ಹೊರಟಿದ್ದಾರೆ. ಅದ್ರಲ್ಲೂ ಡೈರೆಕ್ಟರ್ ಹರ್ಷ ಮತ್ತು ಶಿವಣ್ಣ ಕಾಂಬೋ ಅಂದ್ರೆ ಅಲ್ಲಿ ಕ್ಯೂರಿಯಾಸಿಟಿ ಲೆವೆಲ್ ಕೊಂಚ ಜಾಸ್ತಿನೇ ಇರುತ್ತೆ. ಜಸ್ಟ್ ಫಸ್ಟ್ ಲುಕ್ ಪೋಸ್ಟರ್​ಗಳಿಂದಲೇ ಕ್ರೇಜ್ ಹುಟ್ಟಿಸಿರೋ ವೇದ, ಇದೀಗ ಶಿವಣ್ಣ ಸಿನಿ ಕರಿಯರ್​ನಲ್ಲಿ ನೂತನ ದಾಖಲೆಗೆ ಮುಂದಾಗಿದೆ.

ಕೆಜಿಎಫ್​ನಂತಹ ಮಾಸ್ಟರ್​ಪೀಸ್ ಸಿನಿಮಾನೇ ತನ್ನ ವೆಪನ್ಸ್​ನ ಎಕ್ಸ್​ಪ್ಲೋರ್ ಮಾಡೋ ಅಂತಹ ಟೀಸರ್ ಮಾಡಲಿಲ್ಲ. ಆದ್ರೀಗ ಆ ಕಾರ್ಯವನ್ನು ವೇದ ಚಿತ್ರತಂಡ ಮಾಡ್ತಿದೆ. ಹೌದು.. ಕೊಡಲಿ, ಮಚ್ಚು, ಗನ್ ಸೇರಿದಂತೆ 60ರ ದಶಕದಿಂದ ಪ್ರಸ್ತುತ ಕಾಲಘಟ್ಟದವರೆಗೆ ಚಿತ್ರದಲ್ಲಿ ಬಳಸಿರೋ ಎಲ್ಲಾ ವೆಪನ್ಸ್​ ಇರೋ ಟೀಸರ್ ಲಾಂಚ್ ಮಾಡ್ತಿದೆ ಟೀಂ.

ಇದೇ ನವೆಂಬರ್ 11ರ ಸಂಜೆ 7 ಗಂಟೆಗೆ ವೆಪನ್ಸ್ ಟೀಸರ್ ರಿವೀಲ್ ಆಗಲಿದ್ದು, ಸಿನಿಮಾ ಕೂಡ ಇದೇ ಡಿಸೆಂಬರ್ 23ಕ್ಕೆ ವರ್ಲ್ಡ್​ವೈಡ್ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಭಜರಂಗಿ, ವಜ್ರಕಾಯ, ಭಜರಂಗಿ 2 ಸಿನಿಮಾಗಳಲ್ಲಿ ಶಿವಣ್ಣಗೆ ಸ್ಪೆಷಲ್ ಲುಕ್ಸ್ ಹಾಗೂ ವೆಪನ್ಸ್ ನೀಡಿದ್ದ ಹರ್ಷ, ಈ ಚಿತ್ರದಲ್ಲಿ ಯಾವ ಬಗೆಯ ವೆಪನ್ಸ್ ಬಳಸಿರ್ತಾರೆ ಅನ್ನೋ ಕುತೂಹಲ ಜೋರಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES