Wednesday, January 22, 2025

ಶ್ರೀದೇವಿ ಡ್ರಾಮಾ ಕಂಪನಿಯಿಂದ ಕಾಂತಾರಗೆ ಟ್ರಿಬ್ಯೂಟ್

ಕಾಂತಾರ ಬರೋವರೆಗೂ ಕೆಜಿಎಫ್​ದೇ ಹವಾ ಆಗಿತ್ತು. ಇದೀಗ ಕಾಂತಾರದ ಕಿಚ್ಚು ವಿಶ್ವದ ಮೂಲೆ ಮೂಲೆಗೆ ಹಬ್ಬಿದೆ. ರಿಷಬ್ ಶೆಟ್ಟಿ ಮಾಡಿರೋ ಮ್ಯಾಜಿಕ್​ಗೆ ಇಡೀ ವಿಶ್ವ ಸಿನಿದುನಿಯಾ ಸ್ಟನ್ ಆಗಿದೆ. ಇಂದಿಗೂ ಹೌಸ್​ಫುಲ್ ಪ್ರದರ್ಶನ ಕಾಣ್ತಿರೋ ಕಾಂತಾರಗೆ ತೆಲುಗು ಈಟಿವಿಯ ಕಾಮಿಡಿ ಶೋ ಸ್ಪೆಷಲ್ ಟ್ರಿಬ್ಯೂಟ್ ನೀಡಿದೆ.

  • 300 ಕೋಟಿ ಕ್ಲಬ್.. ಯಶಸ್ವಿ 50ನೇ ದಿನದತ್ತ ಹೌಸ್​ಫುಲ್

ಯೆಸ್.. ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸ್ತಿರೋ ಕಾಂತಾರ ಸಿನಿಮಾ, ಕೆಜಿಎಫ್ ರೀತಿ ಪ್ರತೀ ದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ವರ್ಲ್ಡ್​ವೈಡ್ ಬರೋಬ್ಬರಿ 300 ಕೋಟಿ ಪೈಸಾ ವಸೂಲ್ ಮಾಡಿರೋ ರಿಷಬ್ ಶೆಟ್ಟಿಯ ಕಾಂತಾರ, ಯಶಸ್ವಿ 50ನೇ ದಿನದತ್ತ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ.

ಪಂಜುರ್ಲಿ, ಕೋಲ, ದೈವಾರಾಧನೆಯ ಝಲಕ್​ಗಳು ನೋಡುಗರಿಗೆ ಇನ್ನಿಲ್ಲದೆ ಥ್ರಿಲ್ ಕೊಟ್ಟಿವೆ. ಅದ್ರಲ್ಲೂ ರಿಷಬ್ ಶೆಟ್ಟಿಯ ಕ್ಲೈಮ್ಯಾಕ್ಸ್ ಎನರ್ಜಿ ವ್ಹಾವ್ ಫೀಲ್ ಕೊಟ್ಟಿದೆ. ಕಥೆ, ಪಾತ್ರಗಳು, ಲೊಕೇಷನ್ಸ್, ಕರಾವಳಿಯ ಆಚಾರಗಳು, ನಂಬಿಕೆ ಹೀಗೆ ಎಲ್ಲವೂ ಸಿನಿಮಾಗೆ ಪೂರಕವಾಗಿವೆ. ಹಾಗಾಗಿಯೇ ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಕ್ಕಿದೆ.

ಹೊಂಬಾಳೆ ಫಿಲಂಸ್ ಬ್ಯಾನರ್​ನಡಿ ತಯಾರಾದ ಈ ಸಿನಿಮಾ ಕೆಜಿಎಫ್ ದಾಖಲೆಗಳನ್ನೂ ಮುರಿದಿರೋದು ಇಂಟರೆಸ್ಟಿಂಗ್. ಅದು ಌಕ್ಷನ್ ಬ್ಲಾಕ್​ಬಸ್ಟರ್ ಆದ್ರೆ, ಇದು ಡಿವೈನ್ ಬ್ಲಾಕ್ ಬಸ್ಟರ್ ಆಗಿ ರಾರಾಜಿಸ್ತಿದೆ. ಬರೀ ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಶೆಟ್ರ ಕಾಂತಾರದ ಕಿಚ್ಚು ಜೋರಿದೆ.

ವಿಶೇಷ ಅಂದ್ರೆ ಕಾಂತಾರ ಕ್ಲೈಮ್ಯಾಕ್ಸ್​​ನಲ್ಲಿ ರಿಷಬ್​ರ ಆ ಅಲ್ಟಿಮೇಟ್ ಪರ್ಫಾಮೆನ್ಸ್​ನ ತೆಲುಗು ಈಟಿವಿ ಮಂದಿ ರೀ ಕ್ರಿಯೇಟ್ ಮಾಡಿದ್ದಾರೆ. ಹೌದು.. ಕಾಮಿಡಿ ಶೋ ಒಂದರಲ್ಲಿ ಇದನ್ನ ಬಹಳ ಸೀರಿಯಸ್ ಆಗಿ ಹಾಗೂ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಶ್ರೀದೇವಿ ಡ್ರಾಮಾ ಕಂಪನಿ ಶೋನಲ್ಲಿ ಇದನ್ನ ಮಾಡಿದ್ದು, ಕಾಂತಾರ ಟೀಂಗೆ ಟ್ರಿಬ್ಯೂಟ್ ಅಂತ ಘೋಷಿಸಿದ್ದಾರೆ. ಅಂದಹಾಗೆ ಇದು ಜಸ್ಟ್ ಪ್ರೋಮೋ. ಫುಲ್ ಎಪಿಸೋಡ್ ಇದೇ ಭಾನುವಾರ ಮಧ್ಯಾಹ್ನ 1ಕ್ಕೆ ಪ್ರಸಾರವಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES