Monday, December 23, 2024

ಪುಂಡಾಟ ಮೆರದ ಸಿಖ್ ಯುವಕರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಬೀದರ್; ಅಡ್ಡಾದಿಡ್ಡಿ ಬೈಕ್​ ಚಲಾಯಿಸಿ, ಪುಂಡಾಟ ಮೆರದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಸಿಖ್ ಯುವಕರಿಗೆ ಬಿದರ್​ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಕೈಯಲ್ಲಿ ಖಡ್ಗ ಹಿಡಿದು, ಓವರ್​ ಸ್ಪೀಡ್​ ಬೈಕ್ ಚಲಾಯಿಸಿದ ಸಿಖ್​ ಯುವಕರ ಪುಂಡಾಟ ಕಂಡ ಸ್ವತಃ ಮಧ್ಯ ಪ್ರವೇಶಿಸಿದ ಡೈವೈಎಸ್ಪಿ ಸತೀಶ್, ಸಿಪಿಐ ಹಿರೇಮಠ ಅವರಿಗೆ ಖಡ್ಗ ತೋರಿಸಿದ ಯುವಕರಿಗೆ ಲಾಠಿ ರುಚಿ ತೋರಿಸಿ ಇನ್ನೊಮ್ಮೆ ಈ ರೀತಿ ಆಗದಂತೆ ತಾಕೀತು ಮಾಡಿದ್ದಾರೆ.

ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಒಂದು ಕಡೆ ಬಿಜೆಪಿ ಪ್ರತಿಭಟನೆ ನಡೆಯುತ್ತಿದ್ದರೇ, ಇನ್ನೊಂದು ಕಡೆ ಈ ಯುವಕರು ಪುಂಡಾಟ ಮೆರೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅಡ್ಡಾದಿಡ್ಡಿ ಬೈಕ್ ಚಲಾಯಿಸಿ, ಖಡ್ಗ ಕೈಯಲ್ಲಿ ಹಿಡಿದು ತಿರುಗಿಸುತ್ತಿದ್ದವರಿಗೆ ಸರಿಯಾಗಿ ಬಾರಿಸಿ ಚಳಿ ಬೀಡಿಸಿದ್ದಾರೆ.

ನಿನ್ನೆ ಗುರುನಾನಕ್ ಜಯಂತಿ ಹಿನ್ನೆಲೆ ಹಲವೆಡೆಯಿಂದ ಬೀದರ್​ ನಗರಕ್ಕೆ ಸಿಖ್​ ಸಮುದಾಯದ ಯುವಕರು ಆಗಮಿಸಿ‌ದ್ದಾರೆ. ಇನ್ನು ಯುವಕರು, ಪೊಲೀಸರ ಮಧ್ಯ ಸಂಘರ್ಷದ ನಡುವೆ ಇಬ್ಬರು ಪೊಲೀಸ್ ಪೇದೆಗಳಿಗೆ ಸಣ್ಣಪುಟ್ಟ ಗಾಯವಾಗಿವೆ ಎನ್ನಲಾಗುತ್ತಿದೆ.

RELATED ARTICLES

Related Articles

TRENDING ARTICLES