Wednesday, January 22, 2025

ಆ್ಯಂಬುಲೆನ್ಸ್​​​ಗೆ ದಾರಿ ಮಾಡಿಕೊಟ್ಟ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸ್ತಿದ್ದಾರೆ. ಈ ಸಂದರ್ಭದಲ್ಲಿ ಆ್ಯಂಬುಲೆನ್ಸ್​​​ಗೆ ದಾರಿ ಮಾಡಿಕೊಟ್ಟು ದೇಶಕ್ಕೆ ಮಾದರಿಯಾಗಿದೆ.

ಮೋದಿ ಕಾಂಗ್ರಾ ಜಿಲ್ಲೆಯ ಚಂಬಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಮಾಡ್ತಿದ್ರು. ಈ ಸಂದರ್ಭದಲ್ಲಿ ಅವರು ಆ್ಯಂಬುಲೆನ್ಸ್​​​ಗೆ ದಾರಿ ಮಾಡಿ ಕೊಡಲು ತಮ್ಮ ಬೆಂಗಾವಲು ಪಡೆಯನ್ನು ತಡೆದಿದ್ದಾರೆ. ಈ ವಿಡಿಯೋದಲ್ಲಿ ಆ್ಯಂಬುಲೆನ್ಸ್​​​​ ಅತಿವೇಗವಾಗಿ ಸಾಗಿದ್ದು, ಮೋದಿಯವರ ಬೆಂಗಾವಲು ವಾಹನ ಆ್ಯಂಬುಲೆನ್ಸ್​​​​​ ತೆರಳಿದ ನಂತರ ಸಾಗಿದೆ. ಜನರು ಸೆಲೆಬ್ರಿಟಿ, ರಾಜಕಾರಣಿಗಳನ್ನು ಅನುಸರಿಸುತ್ತಾರೆ. ಅವರ ಉಡುಗೆ-ತೊಡುಗೆಯಿಂದ ಹಿಡಿದು ಅವರ ಸತ್ಕಾರ್ಯಗಳನ್ನು ಫಾಲೋ ಮಾಡ್ತಾರೆ. ಮೋದಿಯ ಈ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

RELATED ARTICLES

Related Articles

TRENDING ARTICLES