Sunday, January 19, 2025

ದಿಯಾ ಕ್ಲೈಮ್ಯಾಕ್ಸ್​ನಲ್ಲಿ ಮಾಯ.. ದೆವ್ವವಾದಳಾ ಖುಷಿ..?

ಕೊರೋನಾ ನಡುವೆಯೂ ಪ್ರೇಕ್ಷಕರ ಗಮನ ಸೆಳೆದ ಮೂವಿ ದಿಯಾ. ಅದ್ರ ಕ್ಲೈಮ್ಯಾಕ್ಸ್​ನಲ್ಲಿ ಬಾಯ್​ಫ್ರೆಂಡ್​ನ ಕಳೆದುಕೊಂಡು ನಾಪತ್ತೆಯಾಗಿದ್ದ ನಾಯಕಿ ಖುಷಿ, ಇದೀಗ ದೆವ್ವವಾಗಿ ಪ್ರತ್ಯಕ್ಷ ಆಗಿದ್ದಾಳೆ. ಇಷ್ಟಕ್ಕೂ ಆಕೆಗೆ ಏನಾಯ್ತು..? ಇದು ಹೊಸ ಮೂವಿ ಕಂಟೆಂಟಾ ಹೇಗೆ ಅನ್ನೋದ್ರ ರಿಪೋರ್ಟ್​ ನೀವೇ ಓದಿ.

  • ನವೆಂಬರ್ 14ಕ್ಕೆ ‘ಮೆಲ್ಲುಸಿರೆ ಸವಿಗಾನ’.. 25ಕ್ಕೆ ಸ್ಪೂಕಿ ತೆರೆಗೆ

ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಸ್ಯಾಂಡಲ್​ವುಡ್ ಅಂಗಳದಲ್ಲಿ ಇತ್ತೀಚೆಗೆ ಒಂದಕ್ಕಿಂತ ಒಂದು ಸಿನಿಮಾ ಬೆಸ್ಟ್ ಅನಿಸ್ತಿವೆ. ಅದ್ರಲ್ಲೂ ಮೇಕಿಂಗ್ ಜೊತೆಗೆ ಕಥೆ ಹಾಗೂ ಪಾತ್ರಗಳ ವಿಚಾರದಲ್ಲೂ ಯುನಿಕ್​ನೆಸ್ ಕಾಯ್ದುಕೊಳ್ಳಲಾಗ್ತಿದೆ. ಸದ್ಯ ಅಂತಹ ಸಿನಿಮಾಗಳ ಸಾಲಿಗೆ ಸ್ಪೂಕಿ ಕಾಲೇಜ್ ಹೊಸ ಸೇರ್ಪಡೆ ಆಗಲಿದೆ.

ಕೊರೋನಾ ಸಂಕಷ್ಟ ಕಾಲದಲ್ಲೂ ಕನ್ನಡ ಚಿತ್ರರಂಗವನ್ನು ಜೀವಂತವಾಗಿಟ್ಟ ಸಿನಿಮಾ ದಿಯಾ. ಅದರ ನಾಯಕನಟಿ ಖುಷಿ ರವಿ, ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ತನ್ನ ಬಾಯ್​ಫ್ರೆಂಡ್​ನ ಕಳೆದುಕೊಳ್ತಾರೆ. ಅದಾದ ಬಳಿಕ ಆಕೆಯೂ ಸೂಸೈಡ್ ಮಾಡಿಕೊಂಡ್ರಾ..? ಗೊತ್ತಿಲ್ಲ. ಆದ್ರೆ ಬಹಳ ದಿನಗಳ ನಂತ್ರ ಇದೀಗ ದೆವ್ವದ ರೂಪ ತಾಳಿದ್ದಾರೆ. ಅದು ಸ್ಪೂಕಿ ಕಾಲೇಜ್ ಅನ್ನೋ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಸಿನಿಮಾಗಾಗಿ ಅನ್ನೋದು ವಿಶೇಷ.

ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಹೆಚ್​.ಕೆ. ಪ್ರಕಾಶ್ ನಿರ್ಮಾಣದ ಸ್ಪೂಕಿ ಕಾಲೇಜ್​ಗೆ ಭರತ್ ಌಕ್ಷನ್ ಕಟ್ ಹೇಳಿದ್ದಾರೆ. ಇನ್ನು ಇಲ್ಲಿ ಖುಷಿ ಜೊತೆ ಲೀಡ್​ನಲ್ಲಿ ಕಿರುತೆರೆ ಹಾಗೂ ಸಿನಿಮಾಗಳಲ್ಲೂ ಛಾಪು ಮೂಡಿಸಿರೋ ವಿವೇಕ್ ಸಿಂಹ ಬಣ್ಣ ಹಚ್ಚಿದ್ದಾರೆ. ಸದಾ ಲವ ಲವಿಕೆಯಿಂದ ಇರೋ ವಿವೇಕ್​ಗೆ ಈ ಚಿತ್ರ ಬಿಗ್ ಬ್ರೇಕ್ ಕೊಡೋ ಮನ್ಸೂಚನೆ ನೀಡಿದೆ.

ಈಗಾಗ್ಲೇ ಥಿಯೇಟರ್, ಮಾಲ್, ಮೆಟ್ರೋ ಹೀಗೆ ಸಿಕ್ಕ ಸಿಕ್ಕಲ್ಲೆಲ್ಲಾ ಸ್ಪೂಕಿ ಕಾಲೇಜ್ ಫ್ಲೆಕ್ಸ್, ಪೋಸ್ಟರ್​ಗಳು ರಾರಾಜಿಸ್ತಿವೆ. ಸಿನಿಮಾ ಕೂಡ ಇದೇ ನವೆಂಬರ್ 25ಕ್ಕೆ ತೆರೆಗಪ್ಪಳಿಸಲಿದ್ದು, ಮೆಲ್ಲುಸಿರೆ ಸವಿಗಾನ ಅನ್ನೋ ಅಣ್ಣಾವ್ರ ಹಾಡಿನ ರೀಮಿಕ್ಸ್ ವರ್ಷನ್ ಈ ಚಿತ್ರದಲ್ಲಿ ಅಳವಡಿಸಲಾಗಿದೆ. ರೀಷ್ಮಾ ನಾಣಯ್ಯ ಸೊಂಟ ಬಳುಕಿಸಿರೋ ಈ ಹಾಡಿಗೆ ಅಜನೀಶ್ ಟ್ಯೂನ್ ಇದ್ದು, ಇದೇ ನವೆಂಬರ್ 14ಕ್ಕೆ ರಿಲೀಸ್ ಆಗ್ತಿದೆ ಆ ಸ್ಪೆಷಲ್ ವಿಂಟೇಜ್ ಸಾಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES