Wednesday, January 22, 2025

ಜಮ್ಮು & ಕಾಶ್ಮೀರದಲ್ಲಿ ಹಿಮಪಾತ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳಿಂದ ಹಿಮಪಾತ ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಜ್​​​ ಜಿಲ್ಲೆಯ ಮೊಘಲ್​​​ ರಸ್ತೆ, ಪಿರ್​​​ಪಂಜಾಲ್​​ ಶ್ರೇಣಿಗಳಲ್ಲಿ ಭಾರೀ ಹಿಮಪಾತವಾಗಿದೆ.

ಮೊಘಲ್​​ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ 3,500 ಮೀಟರ್​​ ಅಡಿ ಎತ್ತರದಲ್ಲಿದೆ. ಹಿಮಪಾತದಿಂದ ರಸ್ತೆ ಸಂಪರ್ಕಗಳು ಬಂದ್​​ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತಿ ವರ್ಷ ಕೂಡ ಜನರು, ಪ್ರಾಣಿಗಳು ಹಿಮಪಾತದಿಂದ ತೊಂದರೆಗೆ ಸಿಲುಕುತ್ತಿದ್ದಾರೆ.

RELATED ARTICLES

Related Articles

TRENDING ARTICLES