Friday, November 22, 2024

ಅದ್ಭುತ ಪ್ರತಿಭೆ ಶಂಕರ್ ನಾಗ್ ಅವರ ಜನ್ಮದಿನ

ಕರುನಾಡು ಕಂಡ ಅದ್ಭುತ ಪ್ರತಿಭೆ ನಟ ಶಂಕರ್ ನಾಗ್, ಪ್ರೀತಿಯ ಶಂಕರಣ್ಣ ನಮ್ಮೊಂದಿಗೆ ಇದ್ದಿದ್ರೆ ಇವತ್ತು 68ನೇ ಹುಟ್ಟುಹಬ್ಬ ಆಚರಿಸಿಕೊಳ್ತಾ ಇದ್ದರು.

ಆದ್ರೆ ಈಗ ಅವರಿಲ್ಲ. ಆದ್ರೆ ಅವರ ಸಾಧನೆ ಅಪಾರ, ಶಂಕರ್ ನಾಗ್ ಅವರು ನವೆಂಬರ್ 9, 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ್ರು. ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರ್ ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಂಡ್ರು. ತಮ್ಮ ಗೆಳೆಯರೊಂದಿಗೆ ಅವರು ರಚಿಸಿದ ಮರಾಠಿ ಚಿತ್ರ ’22 ಜೂನ್ 1897′ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.

ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 92 ಚಿತ್ರಗಳಲ್ಲಿ ನಟಿಸಿದರು. ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ, ಅದ್ಭುತ ರಂಗಭೂಮಿ ಕಲಾವಿದ, ಹೊಸತನದ ನಿರ್ದೇಶಕರು, ಅತ್ಯುತ್ತಮ ತಂತ್ರಜ್ಞರಾದ, ನಟ – ನಿರ್ದೇಶಕ ಶಂಕರ್ ನಾಗ್ ಜನ್ಮದಿನದ ಸವಿನೆನಪು ನಮ್ಮಲ್ಲಿ ಹಚ್ಚ ಹಸಿರಾಗಿ ಉಳಿದಿದೆ.

RELATED ARTICLES

Related Articles

TRENDING ARTICLES