Wednesday, January 22, 2025

ಸತೀಶ್ ಜಾರಕಿಹೋಳಿ ವಿರುದ್ಧ ಶಾಸಕ ಪ್ರೀತಂಗೌಡ ಆಕ್ರೋಶ

ಹಾಸನ:ಸತೀಶ್ ಜಾರಕಿಹೋಳಿ ವಿರುದ್ಧ ಶಾಸಕ ಪ್ರೀತಂಗೌಡ ಆಕ್ರೋಶ, ಪ್ರತಿಭಟನೆಯಲ್ಲಿ ಭಾಗವಹಿಸಿ ಶಾಸಕ ಪ್ರೀತಂಗೌಡ ಹೇಳಿಕೆ ನೀಡಿದ್ದಾರೆ. ಸನಾತನ ಹಿಂದೂ‌ ಧರ್ಮದ ಬಗ್ಗೆ ಬಹಳ‌ ತುಚ್ಯವಾಗಿ, ವಿಕೃತ ಮನಸ್ಸಿನಿಂದ ಕೂಡಿದ ಹೇಳಿಕೆ ನೀಡಿದ್ದಾರೆ.

ಪದೇ ಪದೇ ಇದನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸತೀಶ್ ಜಾರಕಿಹೋಳಿ ಜಾರಕಿಹೋಳಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಬಹುಸಂಖ್ಯಾತರ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ನೀಚವಾಗಿ ಮಾತನಾಡಿದ್ದಾರೆ. ದೇಶದ ಸಮಸ್ತ ಹಿಂದೂ ಭಾಂದವರು ಇದನ್ನು ಖಂಡಿಸುತ್ತಾರೆ.ಅವರಿಗೆ ಮಾನ, ಮರ್ಯಾದೆ ಇದ್ದರೆ ಕೂಡಲೇ ಕ್ಷಮೆಯಾಚಿಸಬೇಕು. ಅವರು ರಾಜಕೀಯದಲ್ಲಿ ಇರಲು ಯೋಗ್ಯರಲ್ಲ, ಕೂಡಲೇ ರಾಜೀನಾಮೆ ಕೊಡಬೇಕು.

ಸತೀಶ್ ಜಾರಕಿಹೋಳಿ ಚುನಾಯಿತ ಜನಪ್ರತಿನಿಧಿಯಾಗಲು ನಾಲಾಯಕ್, ಎರಡು, ಮೂರು ಸಾವಿರ ವರ್ಷದ ಸನಾತನ ಧರ್ಮದ ಬಗ್ಗೆ ಮಾತನಾಡುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ ಎಂದರೆ ಇದು ಅವರ ಅಂತ್ಯದ ಕಾಲ ಆರಂಭವಾಗಿದೆ. ಅವರಿಗೆ ಇದು ಶೋಭೆ ತರುವುದಿಲ್ಲ, ಒಣಪ್ರತಿಷ್ಠಯನ್ನು ಬಿಟ್ಟು ತಕ್ಷಣವೇ ಕ್ಷಮೆ ಕೇಳಬೇಕು.ಅವರು ಧರ್ಮಕ್ಕಿಂತ ದೊಡ್ಡವರಾಗಿದ್ದೇವೆ ಎನ್ನುವ ಭ್ರಮೆಯಲ್ಲಿದ್ದರೆ ಅದನ್ನು ಇಳಿಸುವುದು ಹಿಂದೂ ಸಮಾಜಕ್ಕೆ ಗೊತ್ತಿದೆ.

ಚುನಾವಣೆಯಲ್ಲಿ 2000 ಮತಗಳ ಅಂತರದಲ್ಲಿ ಸೋತಿದ್ರು, ಈ‌ ಭಾರಿ ಬೆಳಗಾಂನ ಹಿಂದೂ ಸಮಾಜ ತೋರಿಸುತ್ತೆ. ಬಹುಸಂಖ್ಯಾತರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಅಕ್ಷಮ್ಯ ಅಪರಾಧ. ನಾವು ಧರ್ಮವನ್ನು ಆರಾಧಿಸಿಕೊಂಡು, ಗೌರವಿಸಿಕೊಂಡು ಬಂದಿರುವವರು. ವೈಯುಕ್ತಿಕವಾಗಿ ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕಾದರೆ ಬೇರೆ ಏನಾದರೂ ಮಾತನಾಡಲಿ,
ಹಿಂದೂ ಸಮಾಜದ ಬಗ್ಗೆ ಮಾತನಾಡುತ್ತಾರೆ ಎಂದರೆ ಅವರ ತಲೆಗೆ ಏನು ನಾಟಿದೆ ಅನ್ನೋದು ಗೊತ್ತಿಲ್ಲ.
ಹಿಂದೂ ಸಮಾಜದ ಆಕ್ರೋಶ ಇಡೀ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುತ್ತೆ, ಸುಟ್ಟು ಹಾಕುತ್ತೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES