Monday, December 23, 2024

ದೇಶವು ಮನಮೋಹನ್ ಸಿಂಗ್‌ಗೆ ಋಣಿಯಾಗಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಶಂಸೆ

ನವದೆಹಲಿ: ಭಾರತದ ಆರ್ಥಿಕ ಸುಧಾರಣೆಗಳಿಗಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರ ಕೊಡುಗೆಗೆ ದೇಶವು ಋಣಿಯಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಜಿ ಪ್ರಧಾನಿಯನ್ನ ಪ್ರಶಂಸೆ ಮಾಡಿದ್ದಾರೆ.

ಟಿಐಒಎಲ್ ಅವಾರ್ಡ್ಸ್ 2022 ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್​ ಗಡ್ಕರಿ ಅವರು, ಮಾಜಿ ಪ್ರಧಾನಿ ಅವರು ಬಡ ಜನರಿಗೆ ಹಲವು ಅದರ ಪ್ರಯೋಜನಗಳನ್ನು ಒದಗಿಸಿದ್ದಾರೆ. ಭಾರತಕ್ಕೆ ಅವರ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದರು.

1991 ರಲ್ಲಿ ವಿತ್ತ ಸಚಿವರಾಗಿ ಮೊನಹೋನ್​ ಸಿಂಗ್ ಅವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು. ಅದು ಉದಾರ ಆರ್ಥಿಕತೆಗೆ ನಾಂದಿ ಹಾಡಿತು ಎಂದು ಗಡ್ಕರಿ ಹಾಡಿ ಹೊಗಳಿದರು.

ಹೊಸ ದಿಕ್ಕನ್ನು ನೀಡಿದ ಆರ್ಥಿಕ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ. 1990 ರ ದಶಕದ ಮಧ್ಯಭಾಗದಲ್ಲಿ ಅವರು ಮಹಾರಾಷ್ಟ್ರದಲ್ಲಿ ನಾನು ಸಚಿವರಾಗಿದ್ದಾಗ ಮಾಜಿ ಪ್ರಧಾನಿಯವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳಿಂದಾಗಿ ಮಹಾರಾಷ್ಟ್ರದಲ್ಲಿ ರಸ್ತೆಗಳನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡರು.

RELATED ARTICLES

Related Articles

TRENDING ARTICLES