Monday, December 23, 2024

ವಿಕಿಪೀಡಿಯ ನೋಡಿ ಹಿಂದು ಬಗ್ಗೆ ಹೇಳೋದಲ್ಲ; ಸಿಎಂ ಕೆಂಡಾಮಂಡಲ

ದಾವಣಗೆರೆ; ಹಿಂದು ಎನ್ನೋವ ಪದ ಅವಾಚ್ಯ ಶಬ್ದ ಎಂದು ಇತ್ತೀಚಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದಾರೆ.

ಇಂದು ಬೆಳಗಾವಿ ಜಿಲ್ಲೆ ಎರಡು ಕಡೆ ಜನ‌ ಸಂಕಲ್ಪ ಸಮಾವೇಶ ಹಿನ್ನಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎ. ಹಿಂದು ಬಗ್ಗೆ ವಿಕಿಪಿಡಿಯಾ ನೋಡಿ ಹೇಳೋದಲ್ಲ. ಯಾವೋದೋ ಪುಸ್ತಕ ನೋಡಿ ಹೇಳಿಕೆ ಕೊಡೋದಲ್ಲ. ವಿಕಿಪಿಡಿಯಾ ವಿಶ್ವಾಸಾರ್ಹತೆ ಎಷ್ಟಿದೆ ಅಂತ ಗೊತ್ತಿದೆ. ವಿಕಿಪಿಡಿಯಾ ಮೇಲೆ ಸಾಕಷ್ಟು ಕೇಸ್, ಆರೋಪಗಳಿವೆ. ಅದರ ಮುಖ್ಯಸ್ಥ ಜೈಲಿನಲ್ಲಿ ಇದ್ದು ಬಂದೋವನು ಎಂದು ಸಿಎಂ ಕೆಂಡಾಮಂಡಲರಾದರು.

ಬಹಿರಂಗ ಸಭೆಯಲ್ಲಿ ಹಿಂದು ಬಗ್ಗೆ ಸತೀಶ್​ ಜಾರಕಿಹೊಳಿ ಹೇಳೋದು ಸರಿಯಲ್ಲ. ಕಾಂಗ್ರೆಸ್ ತನ್ನ ನಿಲುವನ್ನ ಸ್ಪಷ್ಟವಾಗಿ ತಿಳಿಸಬೇಕು. ಸಿದ್ದರಾಮಯ್ಯ ಎಲ್ಲದಕ್ಕೂ ಮಾತನಾಡುತ್ತಾರೆ. ಈ ವಿಚಾರದ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಸಿಎಂ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES