Wednesday, January 22, 2025

ಮೊದಲ ಬಾರಿಗೆ ಶಾಸಕ ಯತ್ನಾಳ್, ಅರುಣ್ ಸಿಂಗ್ ಮುಖಾಮುಖಿ

ವಿಜಯಪುರ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ನಡುವೆ ನಿನ್ನೆ ರಾತ್ರಿ ಮಹತ್ವದ ಮಾತುಕತೆ ನಡೆದಿದೆ.

ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಮಾಲೀಕತ್ವದ ಹೈಪರ್ ಮಾರ್ಟ್ ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜಕೀಯ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ನಿನ್ನೆ ಅರುಣ್ ಸಿಂಗ್ ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪಸಭೆಯಲ್ಲಿ ಭಾಗವಹಿಸಿ ನಂತರ ವಿಜಯಪುರಕ್ಕೆ ಆಗಮಿಸಿದ ಬಳಿಕ ಯತ್ನಾಳ್​ ಅವರನ್ನು ಭೇಟಿ ಮಾಡಿ ಈ ಸಭೆ ನಡೆಸಿದ್ದಾರೆ. ಬೆಳಗ್ಗೆಯಿಂದ ಅರುಣ್ ಸಿಂಗ್ ಅವರಿಂದ ಯತ್ನಾಳ್​ ಅಂತರ ಕಾಯ್ದುಕೊಂಡಿದ್ದರು.

ಇತ್ತೀಚಿಗೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರುವ ಬಗ್ಗೆ ಇಂಡಿ ಕಾರ್ಯಕ್ರಮದಲ್ಲಿ ಅರುಣ್​ ಸಿಂಗ್​ ಜಿಲ್ಲಾ ಬಿಜೆಪಿ, ಯತ್ನಾಳ್​ ಅವರನ್ನ ಹೊಗಳಿದ್ದರು.

RELATED ARTICLES

Related Articles

TRENDING ARTICLES