Wednesday, January 22, 2025

ಸಮಿಫೈನಲ್​ಗೂ ಮುನ್ನ ಇಂಗ್ಲೆಂಡ್​ ತಂಡಕ್ಕೆ ಅಘಾತ; ಈ ವೇಗಿ ಆಡೋದು ಡೌಟು​.!

ಅಡಿಲೇಡ್‌: ಭಾರತ ವಿರುದ್ಧ ಗುರುವಾರ(ನಾಳೆ) ನಡೆಯಲಿರುವ ಟಿ-20 ವಿಶ್ವಕಪ್‌ ಸೆಮಿಫೈನಲ್‌ಗೂ ಮುನ್ನ ಇಂಗ್ಲೆಂಡ್‌ ತಂಡಕ್ಕೆ ಭಾರೀ ಆಘಾತವಾಗಿದ್ದು, ವೇಗದ ಬೌಲರ್‌ ಮಾರ್ಕ್‌ ವುಡ್‌ ಅವರು ಸ್ನಾಯು ಸೆಳೆತಕ್ಕೀಡಾಗಿದ್ದಾರೆ.

32 ವರ್ಷ ವಯಸ್ಸಿನ ಮಾರ್ಕ್​ ವುಡ್ ಮಂಗಳವಾರ ಅಭ್ಯಾಸ ಪಂದ್ಯದ ವೇಳೆ ಬೌಲರ್ ಮಾರ್ಕ್ ವುಡ್ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ನೆಟ್​ ಪ್ರ್ಯಾಕ್ಟಿಸ್​ನಿಂದ ಹಿಂದೆ ಸರಿದರು. ವುಡ್ ಟಿ-20 ವಿಶ್ವಕಪ್‌ನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನ ಆಡಿ 9 ವಿಕೆಟ್ ಪಡೆದಿದ್ದಾರೆ.

ಇನ್ನು ನಾಳೆ ಮಾರ್ಕ್​ ಚೇತರಿಸಿಕೊಳ್ಳದಿದ್ದರೆ ಬದಲಿಗೆ ವೇಗದ ಬೌಲರ್​ ಟೈಮಲ್ ಮಿಲ್ಸ್ ಅಥವಾ ಚಿಸ್ ಜೋರ್ಡಾನ್ ವುಡ್ ಭಾರತದ ವಿರುದ್ಧ ಇಂಗ್ಲೆಂಡ್​ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶ್ವಕಪ್​ ಆರಂಭಕ್ಕೂ ಮೊದಲು ಮೊಣಕೈ ಗಾಯ ಮಾಡಿಕೊಂಡಿದ್ದ ವುಡ್​, ಬಳಿಕ ಚೇತರಿಸಿಕೊಂಡು ತಂಡದಲ್ಲಿ ಸ್ಥಾನ ಪಡೆದಿದ್ದರು. ಈಗ ಮತ್ತೆ ಗಾಯಗೊಂಡಿರೋದು ಇಂಗ್ಲೆಂಡ್ ತಂಡಕ್ಕೆ ಹಿನ್ನಡೆ ಉಂಟು ಮಾಡುವ ಆತಂಕವಿದೆ.

RELATED ARTICLES

Related Articles

TRENDING ARTICLES